ಮನೆ ಪ್ರಕೃತಿ ಜೂನ್ 11 ಮತ್ತು 12 ರಂದು ‘ಮೈಗ್ರೀನ್- 2022’

ಜೂನ್ 11 ಮತ್ತು 12 ರಂದು ‘ಮೈಗ್ರೀನ್- 2022’

0

ಮೈಸೂರು(Mysuru): ಭಾರತೀಯ ಬಿಲ್ಡರ್‌ಗಳ ಸಂಘ ಮೈಸೂರು ಕೇಂದ್ರ ಹಾಗೂ ಮೈಸೂರು ಬಿಲ್ಡರ್‌ಗಳ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಜೂನ್ 11 ಮತ್ತು 12ರಂದು ‘ಮೈಗ್ರೀನ್- 2022’ – ಪರಿಸರ ಸ್ನೇಹಿ ನಿರ್ಮಾಣ ಸಾಮಗ್ರಿಗಳ ಪ್ರದರ್ಶನ ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ‌ಶುಕ್ರವಾರ ಮಾತನಾಡಿದ ಕೇಂದ್ರದ ವಿಶ್ವ ಪರಿಸರ ಮಾಸಾಚರಣೆ ಸಮಿತಿ ಅಧ್ಯಕ್ಷ ನಾಗರಾಜ‌ ವಿ. ಬೈರಿ, ಅವರು, 11ರಂದು‌ ಬೆಳಿಗ್ಗೆ 10ಕ್ಕೆ ಶವರನ್ ಲ್ಯಾಬೊರೇಟರೀಸ್ ವ್ಯವಸ್ಥಾಪಕ ನಿರ್ದೇಶಕ ಸಮ್‌ಚೆರಿಯನ್ ಉದ್ಘಾಟಿಸಲಿದ್ದಾರೆ. 20 ವಿವಿಧ ಕಂಪನಿಗಳು ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ ಎಂದು ಮಾಹಿತಿ ನೀಡಿದರು.

ಪರಿಸರ ಸ್ನೇಹಿ ನಿರ್ಮಾಣ ಸಾಮಗ್ರಿಗಳು, ನವೀಕರಿಸಬಹುದಾದ ಉತ್ಪನ್ನಗಳು, ಸಾವಯವ‌ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ, ರಾಸಾಯನಿಕ ರಹಿತ ಶಾಚಾಲಯ ಶುದ್ಧೀಕರಣ ಪದಾರ್ಥಗಳು ಹಾಗೂ ತಂತ್ರಜ್ಞಾನಗಳ ಜಾಗೃತಿಯನ್ನು ಮೂಡಿಸಲಾಗುವುದು. ಮನೆ ಅಥವಾ ಕಟ್ಟಡ ನಿರ್ಮಿಸುವವರು ಪರಿಸರ ಕ್ರಮಗಳನ್ನು ಕೈಗೊಳ್ಳುವುದು ಹೇಗೆ ಎಂದು ಮಾರ್ಗದರ್ಶನ ನೀಡಲಾಗುವುದು. ಎನ್ಐಇ- ಕ್ರೆಸ್ಟ್ ತಂತ್ರಜ್ಞರು ಉಚಿತವಾಗಿ ಮಾಹಿತಿ ನೀಡಲಿದ್ದಾರೆ’ ಎಂದು‌ ವಿವರಿಸಿದರು.

ಸಾರ್ವಜನಿಕರಿಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರವೇಶವ ಇರಲಿದೆ ಎಂದರು.

ಕೇಂದ್ರದ ಅಧ್ಯಕ್ಷ ಆರ್. ರಘುನಾಥ್, ಎ.ಯೋಗನರಸಿಂಹ ಹಾಗೂ ವೆಂಕಟೇಶ್ ಪ್ರಸಾದ್ ಪಾಲ್ಗೊಂಡಿದ್ದರು.

ಹಿಂದಿನ ಲೇಖನಜೂನ್ 13 ರಂದು ವಿಧಾನ ಪರಿಷತ್ ಚುನಾವಣೆ: ಮತದಾರ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಣೆ
ಮುಂದಿನ ಲೇಖನಜೂ.12 ರಂದು ‘ಗಾನಗಂಧರ್ವ’ ರಸಮಂಜರಿ ಕಾರ್ಯಕ್ರಮ