ಮನೆ ಅಪರಾಧ ಸಾಲ ಮರುಪಾವತಿ ವಿಚಾರಕ್ಕೆ ಕಿರುಕುಳ: ದಿವ್ಯಾಂಗ​ ಆತ್ಮಹತ್ಯೆಗೆ ಶರಣು

ಸಾಲ ಮರುಪಾವತಿ ವಿಚಾರಕ್ಕೆ ಕಿರುಕುಳ: ದಿವ್ಯಾಂಗ​ ಆತ್ಮಹತ್ಯೆಗೆ ಶರಣು

0

ಮಂಗಳೂರು: ಸಾಲ ಮರುಪಾವತಿ ವಿಚಾರದಲ್ಲಿ ಮಂಗಳೂರು ಕ್ಯಾಥೊಲಿಕ್ ಸಹಕಾರಿ (ಎಂಸಿಸಿ) ಬ್ಯಾಂಕ್ ಅಧ್ಯಕ್ಷ ಅನಿಲ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದಿವ್ಯಾಂಗ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಫೆರ್ಮಾಯಿ ಎಂಬಲ್ಲಿ ನಡೆದಿದೆ.

Join Our Whatsapp Group

ಫೆರ್ಮಾಯಿ ನಿವಾಸಿ ಮನೋಹರ್ ಪಿರೇರಾ (46) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಮನೋಹರ್​ ಎಂಸಿಸಿ ಬ್ಯಾಂಕ್​ನಿಂದ 15 ಲಕ್ಷ ಸಾಲ ಪಡೆದಿದ್ದರು. ಕೊರೊನಾ ಬಳಿಕ ನಷ್ಟಕ್ಕೀಡಾಗಿ ಬ್ಯಾಂಕ್ ಸಾಲ ಕಟ್ಟಲು ಆಗಿರಲಿಲ್ಲ. ಹೀಗಾಗಿ ಬ್ಯಾಂಕ್​ನ ಆಡಳಿತ ಮಂಡಳಿ ಮನೆ ಜಪ್ತಿ ಮಾಡಲು ಮುಂದಾಗಿದೆ. ಇದರಿಂದ ನೊಂದ ಮನೋಹರ್​ ಪಿರೇರಾ ಅವರು ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ, ” ಮೂರು ವರ್ಷಗಳಿಂದ ಕೆಲಸಕ್ಕೆ ಹೋಗಿಲ್ಲ. ಹೀಗಾಗಿ 9 ಲಕ್ಷ ರೂ. ಸಾಲ ಬಾಕಿ ಇದೆ. ಹೀಗಾಗಿ ಬ್ಯಾಂಕ್​ ಅಧ್ಯಕ್ಷ ಅನಿಲ್ ಲೋಬೊ ಕಿರುಕುಳ ನೀಡಿದ್ದಾರೆ. ನನ್ನ ಸಾವಿಗೆ ಅನೀಲ್ ಲೋಬೊ ಕಾರಣ” ಎಂದು ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ಬಳಿಕ, ವಿಡಿಯೋವನ್ನು ವಾಟ್ಸಾಪ್​ ಸ್ಟೇಟಸ್​ಗೆ ಹಾಕಿ, ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.