ಮನೆ ಅಪರಾಧ ಬ್ರಿಡ್ಜ್​ ಗೆ ಡಿಕ್ಕಿ ಹೊಡೆದ ಶಾಲಾ ವಾಹನ: ಶಿಕ್ಷಕಿ ಸಾವು, 15 ಮಕ್ಕಳಿಗೆ ಗಂಭೀರ ಗಾಯ

ಬ್ರಿಡ್ಜ್​ ಗೆ ಡಿಕ್ಕಿ ಹೊಡೆದ ಶಾಲಾ ವಾಹನ: ಶಿಕ್ಷಕಿ ಸಾವು, 15 ಮಕ್ಕಳಿಗೆ ಗಂಭೀರ ಗಾಯ

0

ಜೈಪುರ: ನಿರ್ಮಾಣ ಹಂತದಲ್ಲಿರುವ ಬ್ರಿಡ್ಜ್​ ಗೆ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿ ಸಾವನ್ನಪ್ಪಿದ್ದು, 15 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜೈಪುರ NH 52 ರ ಭೋಜ್ಲಾವಾ ಕಟ್ ಬಳಿ ನಡೆದಿದೆ.

Join Our Whatsapp Group

ಬ್ರಿಡ್ಜ್​ ನಿಂದ ಇಳಿಯುವಾಗ ಬಸ್ ಬ್ರೇಕ್​ ಫೇಲ್ ಆದ ಕಾರಣ ನಿರ್ಮಾಣ ಹಂತದಲ್ಲಿದ್ದ ಮತ್ತೊಂದು ಬ್ರಿಡ್ಜ್ ​ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಬಸ್ ​ನಲ್ಲಿ 30-35 ಮಕ್ಕಳಿದ್ದರು.

ಡಿಕ್ಕಿ ಹೊಡೆದ ನಂತರ ಶಿಕ್ಷಕಿ ಬಸ್​ನಿಂದ ಹೊರಗೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೆಲವು ಮಕ್ಕಳನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದ್ದು, ಕೆಲವು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಲಾ ಬಸ್ ನಿಯಮ ಉಲ್ಲಂಘಿಸಿ ವೇಗವಾಗಿ ಚಲಿಸುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.