ಮನೆ ವ್ಯಾಯಾಮ 40 ಬಳಿಕ ವ್ಯಾಯಾಮಾ: ಪಾಲಿಸಬೇಕಾದ ಸಲಹೆಗಳು

40 ಬಳಿಕ ವ್ಯಾಯಾಮಾ: ಪಾಲಿಸಬೇಕಾದ ಸಲಹೆಗಳು

0

ಫಿಟ್‌ ಆಗಿರಬೇಕು ಎಂಬುದು ಎಲ್ಲರ ಆಸೆ. ಅದಕ್ಕಾಗಿ ಸಾಕಷ್ಟು ಕಟ್ಟು ನಿಟ್ಟಿನ ಜೀವಶೈಲಿ ಅಳವಡಿಸಿಕೊಂಡಿರುತ್ತಾರೆ. ಆಹಾರ, ವ್ಯಾಯಾಮಾ, ಯೋಗ… ಹೀಗೆ ಸಾಕಷ್ಟು ಅಭ್ಯಾಸ ಇಟ್ಟುಕೊಂಡಿರುತ್ತಾರೆ.

ಆದರೆ 40 ವರ್ಷದ ನಂತರವೂ ವ್ಯಾಯಾಮಾ ಮಾಡಿ ಫಿಟ್‌ ಆಗಿರಬೇಕು ಎಂದು ಬಯಸುವವರು ಕೆಲವು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ವ್ಯಾಯಾಮ ಹೇಗಿರಬೇಕು, ಯಾವೆಲ್ಲಾ ರೀತಿಯ ವರ್ಕೌಟ್‌ಗಳನ್ನು ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

  • ಅತ್ಯಂತ ಭಾರವಾದ ತೂಕವನ್ನು ಎತ್ತಬೇಡಿ. 40 ವರ್ಷವಾದ ಮೇಲೆ ಗಾಯ ಅಥವಾ ಕೀಲುಗಳು ಉಳುಕುವ ಸಾಧ್ಯತೆ ಇರುವುದರಿಂದ ಸರಳವಾದ ವ್ಯಾಯಾಮಗಳನ್ನು ಮಾಡುವುದು ಒಳಿತು.
  • ನಿಮ್ಮ ದೇಹವನ್ನು ಅದರ ಮಿತಿಗೆ ಅನುಗುಣವಾಗಿ ಮಾತ್ರ ದಂಡಿಸಿ. ನಿಮ್ಮ ದೇಹದ ಪ್ರಸ್ತುತ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅದಕ್ಕೆ ಅನುಗುಣವಾಗಿ ನಿಮಗೆ ಮಾರ್ಗದರ್ಶನ ನೀಡುವ ತರಬೇತುದಾರರ ಬಳಿ ವ್ಯಾಯಾಮ ಅಭ್ಯಾಸ ಮಾಡುವುದು ಇನ್ನೂ ಒಳ್ಳೆಯದು.
  • ವ್ಯಾಯಾಮದ ಜೀವನಶೈಲಿ ಸುಲಭವಾಗಿರಿಸಿಕೊಳ್ಳಲು ಮಾರ್ಗವೆಂದರೆ ನಿಮ್ಮ ಜೀವನಕ್ರಮವನ್ನು ಆಸಕ್ತಿದಾಯಕವಾಗಿರಿಸುವುದು. ಕ್ರೀಡೆ, ಈಜು, ಕಾರ್ಡಿಯೋ, ಯೋಗ ಅಥವಾ ವಿಭಿನ್ನ, ನವೀನ ವ್ಯಾಯಾಮಗಳೊಂದಿಗೆ ಇದನ್ನು ಮಿಶ್ರಣ ಮಾಡಿ. ಇದು ನಿಮ್ಮ ದೇಹದ ನಮ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ನೀವು ಹೆಚ್ಚು ಕಾಲ ಸದೃಢವಾಗಿರುವಂತೆ ಮಾಡುತ್ತದೆ.
  • ನಿಮ್ಮ ಆರೋಗ್ಯದ ಬಗ್ಗೆ ತುಸು ಹೆಚ್ಚಿನ ಕಾಳಜಿಯೇ ಇರಲಿ. ಏಕೆಂದರೆ 40ರ ನಂತರ ದೇಹ ಬೇಗನೆ ಸುಸ್ತಾಗುತ್ತದೆ. ಹೀಗಾಗಿ ವ್ಯಾಯಾಮದ ನಡುವೆ ವಿಶ್ರಾಂತಿ ತೆಗೆದುಕೊಂಡು ದ್ರವ ಪದಾರ್ಥಗಳನ್ನು ಸೇವಿಸಿ.
  • ಎಲ್ಲಾ ದಿನ ವ್ಯಾಯಾಮ ಮಾಡುವುದು 40 ರ ನಂತರ ಒಳ್ಳೆಯದಲ್ಲ. ದೇಹಕ್ಕೆ ವಿಶ್ರಾಂತಿಯ ಅಗತ್ಯವೂ ಇರುತ್ತದೆ. ಹೀಗಾಗಿ ಪ್ರತಿ ವಾರ ಕನಿಷ್ಠ 1-2 ದಿನಗಳ ವಿರಾಮ ತೆಗೆದುಕೊಳ್ಳಿ. ನಿಮ್ಮ ದೇಹವನ್ನು ಪ್ರತಿದಿನ ದಂಡಿಸುವ ಮೂಲಕ ಮತ್ತು ಒತ್ತಡ ಮತ್ತು ಆಯಾಸವನ್ನು ನೀಡುವುದು ಸೂಕ್ತವಲ್ಲ.
  • ನಿಮ್ಮ ದೇಹಕ್ಕೆ ಚೇತರಿಸಿಕೊಳ್ಳಲು ಸಮಯವನ್ನು ನೀಡಿ. ಇದರಿಂದ ನಿಮ್ಮ ಆರೋಗ್ಯ ಹೆಚ್ಚು ಸಮಯ ಉತ್ತಮವಾಗಿರುತ್ತದೆ. ಅಲ್ಲದೆ ವಿಶ್ರಾಂತಿ ನಿಮ್ಮ ದೇಹಕ್ಕೆ ವ್ಯಾಯಾಮ ಮಾಡುವ ಹುಮ್ಮಸ್ಸನ್ನು ನೀಡುತ್ತದೆ.

ಹಿಂದಿನ ಲೇಖನ989 ಮಂದಿಗೆ ಕೋವಿಡ್‌ ಪಾಸಿಟಿವ್‌
ಮುಂದಿನ ಲೇಖನ2ನೇ ಟಿ20: ಇಂಗ್ಲೆಂಡ್‌ ವಿರುದ್ಧ 49 ರನ್‌ ಗಳ ಜಯ, ಸರಣಿ ವಶಪಡಿಸಿಕೊಂಡ ಭಾರತ