ಮನೆ ರಾಜಕೀಯ ಸಾಮಾನ್ಯ ಜ್ಞಾನ ಇದ್ದರೆ ಉತ್ತಮ ಆಡಳಿತ ಕೊಡಬಹುದು: ಆರ್.ಧ್ರುವನಾರಾಯಣ್

ಸಾಮಾನ್ಯ ಜ್ಞಾನ ಇದ್ದರೆ ಉತ್ತಮ ಆಡಳಿತ ಕೊಡಬಹುದು: ಆರ್.ಧ್ರುವನಾರಾಯಣ್

0

ಮೈಸೂರು(Mysuru):  ಆರ್ಥಿಕ ಮಂತ್ರಿ ಆಗೋರಿಗೆ ಇಂತಹ ಡಿಗ್ರಿನೇ ಇರಬೇಕು ಅಂತೇನು ಇಲ್ಲ. ಮನುಷ್ಯನಿಗೆ ಸಾಮಾನ್ಯ ಜ್ಞಾನ ಇದ್ರೆ ಸಾಕು ಒಳ್ಳೆಯ ಆಡಳಿತ ಕೊಡಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ತಿಳಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯಗೆ ಆರ್ಥಿಕತೆ ಏನು ಗೊತ್ತು ಎಂದು  ಹೇಳಿಕೆ ನೀಡಿದ್ಧ ಸಂಸದ ಪ್ರತಾಪ್  ಸಿಂಹ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಪ್ರತಾಪ್ ಸಿಂಹ ಮಿತಿ ಮೀರಿ ಮಾತನಾಡಿ ಉದ್ದಟತನ ಮಾಡ್ತಿದ್ದಾರೆ. ರಾಜಕಾರಣದಲ್ಲಿ ಕಾಮನ್ ಸೆನ್ಸ್ ಬೇಕು. ಆಡಳಿತ ನಡೆಸುವವರು ಲಂಡನ್ ಗೆ ಹೋಗಿ ಪದವಿ ಪಡೆದು ಬರಬೇಕಾ. ಹಳ್ಳಿ ಪಂಚಾಯಿತಿಗಳಲ್ಲಿ ಜಡ್ಜ್ ಗಳಿಂತ ಉತ್ತಮ ತೀರ್ಪು ಕೊಡ್ತಾರೆ. ಅವರೇನು ಕಾನೂನು ಪಂಡಿತರಾ ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚುವರಿ ಮತ ಪಡೆಯುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಧೃವನಾರಾಯಣ್, ನಮಗೆ ಹೆಚ್ಚುವರಿ ಮತ ಬರಲಿದೆ ಎಂದು ಅಭ್ಯರ್ಥಿಯನ್ನು ಹಾಕಿದ್ದಿವಿ. ಬೇರೆ ಪಕ್ಷದ ಅತೃಪ್ತ ಶಾಸಕರು ನಮಗೆ ಮತ ನೀಡುತ್ತಾರೆ‌. ಆ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಈ ಹಿಂದೆ ಜೆಡಿಎಸ್ ಸಹಾಯ ಮಾಡಿದ್ದೇವೆ. ರಾಜ್ಯ ಸಭಾ ಚುನಾವಣೆಯಲ್ಲಿ ಹೆಚ್.ಡಿ. ದೇವೇಗೌಡರನ್ನು ಹಿರಿಯರು ಎಂದು ಸಹಾಯ ಮಾಡಿದ್ದಿವಿ ಎಂದು ಹೇಳಿದರು.

ಜೆಡಿಎಸ್ ನಮ್ಮಂತೆ ವಿರೋಧ ಪಕ್ಷದಲ್ಲಿ ಇದೆ. ಆದ್ರೆ ಬಿಜೆಪಿ ಟೀಕೆ ಮಾಡುವ ಬದಲು ನಮ್ಮನ್ನೇ ಟೀಕೆ ಮಾಡ್ತಿದ್ದಾರೆ. ಯಾವಾಗಲೂ ವಿರೋಧ  ಪಕ್ಷಗಳು ಒಗ್ಗಾಟಾಗಿ ಆಡಳಿತ ಪಕ್ಷದ ವೈಫಲ್ಯಗಳ ಬಗ್ಗೆ ಹೋರಾಟ ಮಾಡಬೇಕು. ಆದರೆ ಕಾಂಗ್ರೆಸ್ ಬಗ್ಗೆ ಟೀಕೆ ಮಾಡೋ ಪ್ರವೃತ್ತಿಯನ್ನು ಕುಮಾರಸ್ವಾಮಿ ಅವರು ಬಿಡಬೇಕು ಎಂದು ದೃವನಾರಾಯಣ್ ತಿಳಿಸಿದರು.