ಮನೆ ರಾಜ್ಯ ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ ನಿರ್ಬಂಧ, ಹೊಸ ವರ್ಷಾಚರಣೆಗೆ ಜಿಲ್ಲಾಡಳಿತದಿಂದ ಮಾರ್ಗಸೂಚಿ

ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ ನಿರ್ಬಂಧ, ಹೊಸ ವರ್ಷಾಚರಣೆಗೆ ಜಿಲ್ಲಾಡಳಿತದಿಂದ ಮಾರ್ಗಸೂಚಿ

0

ಚಿಕ್ಕಮಗಳೂರು: ಈಗಾಗಲೇ ಪ್ರವಾಸಿಗರಿಂದ ತುಂಬಿರುವ ಕಾಫಿನಾಡು ಹೊಸ ವರ್ಷಾಚರಣೆಗೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಅದರಂತೆ ಡಿಸೆಂಬರ್ 31ರ ಸಂಜೆ 6 ರಿಂದ ಜನವರಿ 1ರ ಬೆಳಗ್ಗೆ 6ರವರೆಗೆ ಪ್ರವಾಸಿ ತಾಣಗಳಿಗೆ ಸಂಪೂರ್ಣ ನಿರ್ಬಂಧ ಹೇರಿದ್ದಾರೆ.

Join Our Whatsapp Group

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸೋಮವಾರ(ಡಿ. 30) ಜಿಲ್ಲಾಡಳಿತ ನೂತನ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು ಆ ಪ್ರಕಾರ ನಡೆದುಕೊಳ್ಳುವಂತೆ ಪ್ರವಾಸಿಗರಿಗೆ ಜೊತೆಗೆ ಕಾರ್ಯಕ್ರಮ ಆಯೋಜಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಮಾರ್ಗಸೂಚಿಯಲ್ಲಿ ಏನಿದೆ:

ರಾಜ್ಯದ ಅತ್ಯಂತ ಎತ್ತರ ಪ್ರದೇಶವಾದ ಮುಳ್ಳಯ್ಯನಗಿರಿ, ದತ್ತಪೀಠ, ದೇವರಮನೆ ಸೇರಿದಂತೆ ಝರಿ ಫಾಲ್ಸ್, ಮಾಣಿಕ್ಯಧಾರ ಫಾಲ್ಸ್ ನ ಪ್ರಮುಖ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ.

– ರೇವ್ ಪಾರ್ಟಿ ರೀತಿಯ ಕಾರ್ಯಕ್ರಮಗಳನ್ನೂ ಮಾಡುವಂತಿಲ್ಲ ಒಂದು ವೇಳೆ ಮಾಡಿದರೆ ಆಯೋಜಕರ ಮೇಲೆಯೇ ಪ್ರಕರಣ ದಾಖಲು.

– ರಾತ್ರಿ 10ರ ಬಳಿಕ ಔಟ್ ಡೋರ್ ಡಿಜೆಗೆ ಸಂಪೂರ್ಣ ನಿಷೇಧ.

– ಸಿಎಲ್ 5 ಲೈಸನ್ಸ್ ಪಡೆದವರು ಸಿಸಿ ಕ್ಯಾಮರಾ ಹಾಕಬೇಕು, ಪೊಲೀಸ್ ಅನುಮತಿ ಪಡೆಯಬೇಕು. ಆದಾಯಕ್ಕಾಗಿ ಇದೇ ಮೊದಲ ಬಾರಿಗೆ ಸಿ.ಎಲ್. 5 ಗೆ ಅನುಮತಿ ನೀಡಿರೋ ಸರ್ಕಾರ, ಒಂದು ದಿನದ ಅನುಮತಿಗೆ 12000 ಸಾವಿರ ನಿಗಧಿ ಮಾಡಿರೋ ಸರ್ಕಾರ.

– ನಗರದ ಮುಖ್ಯರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಗಸ್ತಿನಲ್ಲಿರುವ ಪೊಲೀಸರು.

– ಕುಡಿದು ವಾಹನ ಚಾಲನೆ, ವೀಲ್ಹಿಂಗ್ ಮಾಡೋರ ಮೇಲೆ ಖಾಕಿ ಹದ್ದಿನ ಕಣ್ಣು