ಮನೆ ವ್ಯಕ್ತಿತ್ವ ವಿಕಸನ ಅಗತ್ಯವಿದ್ದಷ್ಟು ಇಟ್ಟುಕೊಳ್ಳಿ

ಅಗತ್ಯವಿದ್ದಷ್ಟು ಇಟ್ಟುಕೊಳ್ಳಿ

0

        ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ವಿಪರೀತ ಹಣ ಇರುವುದು ಅಲ್ಲಲ್ಲಿ ಕಾಣಿಸುತ್ತಿದೆ. ಕೆಲವು ವಿದ್ಯಾರ್ಥಿಗಳ ಪರ್ಸ್‌ನಲ್ಲಿ ಶಾಲೆಗೆ ಬರುವಾಗ 8 ರಿಂದ 10 ಸಾವಿರ ರೂಪಾಯಿಗಳೂ ಇರುತ್ತವೆ ! ತಾಯಿ-ತಂದೆಯರು ಯಾವ ಉದ್ದೇಶಕ್ಕಾಗಿ ಇಷ್ಟು ಹಣವನ್ನು ಮಕ್ಕಳಿಗೆ ಶಾಲೆಗೆ ಬರುವಾಗ ಕೊಟ್ಟಿರುತ್ತಾರೆ ಎನ್ನುವುದೂ ಒಂದು ಪ್ರಶ್ನೆ. ಹಾಗೆಯೇ ವಿದ್ಯಾರ್ಥಿಗಳು ಯಾವ ಅಶ್ಯಕತೆಗಾಗಿ ಇಷ್ಟೊಂದು ಹಣವನ್ನು ಇಟ್ಟುಕೊಂಡು ಶಾಲೆಗೆ ಬರುತ್ತಾರೆ ಎನ್ನವುದು ಮತ್ತೊಂದು ಪ್ರಶ್ನೆ.

Join Our Whatsapp Group

       ಹಣದ ನಿರ್ವಹಣೆ ಎನ್ನುವುದು ಒಂದು ಅದ್ಭುತವಾದ ಕೌಶಲ. ಅದು ಹೇಳಿಕೊಟ್ಟು ಬರುವಂಥಾದ್ದಲ್ಲ. ಅನುಭವದಿಂದ ಬರುವಂಥಾದ್ದು. ಆ ಕೌಶಲದ ಗಳಿಕೆಯಾಗಬೇಕಾದರೆ ಒಂದು ಮೂಲಭೂತ ಅವಶ್ಯಕತೆ ಇದೆ. ಅದೇನೆಂದರೆ ಸ್ವತಃ ವೃತ್ತಿಯಲ್ಲಿ ತೊಡಗಿಕೊಂಡು ಆದಾಯವನ್ನು ಸಂಪಾದಿಸುವ ತನಕ ಯಾರ ಬಳಿಯೇ ಆದರೂ ಅವರ ಅವಶ್ಯಕತೆಗೆ ಎಷ್ಟು ಹಣ ಬೇಕಾಗುತ್ತದೆಯೋ ಅದಕ್ಕಿಂತ ಒಂದು55.ರೂಪಾಯಿಯಾದರೂ ಕಡಿಮೆಯಷ್ಟೇ ಹಣ ಕೈಯಲ್ಲಿರಬೇಕು. ಆಗ ತನ್ನ ಅವಶ್ಯಕತೆಗೆ ಹಣವನ್ನು ಹೇಗೆ ಹೊಂದಿಸಿ ನಿರ್ವಹಿಸಬೇಕು ಎಂಬ ಕೌಶಲವು ಬೆಳೆಯಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳ ತಾಯಿ-ತಂದೆಯರು ಶ್ರೀಮಂತರಿದ್ದಾರೋ ಬಡವರಿದ್ದಾರೋ ಎನ್ನುವುದು ಇಲ್ಲಿ ಮುಖ್ಯ ಸಂಗತಿಯಲ್ಲ. ತಾವು ಎಷ್ಟೇ ಶ್ರೀಮಂತರಾಗಿದ್ದರೂ ತಮ್ಮ ಮಕ್ಕಳಿಗೆ ಹಣಕಾಸಿನ ನಿರ್ವಹಣೆಯ ಕೌಶಲವು ಬರಬೇಕೆಂದು ತಾಯಿ-ತಂದೆಯರು ಭಾವಿಸುತ್ತಾರೋ ಇಲ್ಲವೋ ಎನ್ನುವುದಷ್ಟೇ ಮುಖ್ಯ ಸಂಗತಿ. ಮಕ್ಕಳ ಅಗತ್ಯಕ್ಕಿಂತ ತೀರಾ ಅತಿ ಎನಿಸುವಷ್ಟು ಹಣವನ್ನು ಕೊಡದೆ ಇರುವುದು ಹೇಗೆ ತಾಯಿ-ತಂದೆಯರ ಕರ್ತವ್ಯವಾಗಿರುತ್ತದೆಯೋ, ತಮ್ಮ ಅವಶ್ಯಕತೆಗಿಂತ ತೀರಾ ಜಾಸ್ತಿ ಹಣವನ್ನು ತಮ್ಮ ಕೈಯಲ್ಲಿ ಇರಿಸಿಕೊಳ್ಳದೆ ಇರುವುದು ವಿದ್ಯಾರ್ಥಿಗಳ ಜವಾಬ್ದಾರಿಯೂ ಹೌದು. ಕೈಯಲ್ಲಿ ಆಗತ್ಯಕ್ಕಿಂತ ತೀರಾ ಜಾಸ್ತಿ ಹಣ ಇದ್ದಾಗ ಅದರಿಂದ ಅಪಾಯವೂ ಉಂಟಾಗಬಹುದು. ಅಂತಹ ಅಪಾಯಗಳನ್ನು ನಿರ್ವಹಿಸುವ ಅನುಭವ ಮತ್ತು ಚಾಕಚಕ್ಯತೆಯನ್ನು ಗಳಿಸಿಕೊಳ್ಳುವ ತನಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯಕ್ಕಿಂತ ಹೆಚ್ಚು ಹಣ ಹೊಂದಿರದೆ ಇರುವುದು ಒಳ್ಳೆಯದು. ಅಲ್ಲದೆ ವಿಪರೀತ ಹಣ ಕೈಯಲ್ಲಿದ್ದಾಗ ಬೇಡದ ಬಯಕೆಗಳು ಸುಲಭವಾಗಿ ಬಂದುಬಿಡುತ್ತವೆ. ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ಹಾಳಾಗುವುದಕ್ಕೂ ಕಾರಣವಾಗಬಹುದು. ಹಣದ ನಿರ್ವಹಣೆಯ ಕೌಶಲ ಬರುವ ತನಕ ಹಣದಿಂದ ವ್ಯಕ್ತಿತ್ವ ಹಾಳಾಗುವ ಒಂದು ಸಾಧ್ಯತೆ ಇದ್ದೇ ಇರುತ್ತದೆ. ಆದ್ದರಿಂದ ದಯವಿಟ್ಟು ಅಗತ್ಯಕ್ಕಿಂತ ತೀರಾ ಜಾಸ್ತಿ ಹಣವನ್ನು ಇರಿಸಿಕೊಳ್ಳಬೇಡಿ. ಅಗತ್ಯಕ್ಕೆ ಹಣವನ್ನು ಕೈಯಲ್ಲಿರಿಸಿಕೊಂಡು ಹೆಚ್ಚು ಹಣ ನಿಮ್ಮಲ್ಲಿದ್ದರೆ ಅಂಚೆ ಕಛೇರಿಯಲ್ಲಿ ಅಥವಾ ಬ್ಯಾಂಕ್‌ನಲ್ಲಿ ನಿಮ್ಮ ಹೆಸರಿನಲ್ಲಿ ಉಳಿತಾಯ ಖಾತೆ ತೆರೆದು ಅದರಲ್ಲಿಡಿ.