ಕಾಮಾಲೆ ರೋಗಕ್ಕೆ ಮೂರು ಮುಖ್ಯವಾದ ಕಾರಣಗಳು :
1. ಮೊದಲನೆಯದಾಗಿ ರಕ್ತದಲ್ಲಿರುವ ಕೆಂಪು ರಕ್ತಕಣಗಳು ಕಾರಣಾಂತರಗಳಿಂದ ತನ್ನ ಆಯುಷ್ಯಕ್ಕಿಂತ ಕಡಿದು ಅವಧಿಯಲ್ಲಿ ನಾಶವಾಗುತ್ತಿದ್ದರೆ, ಅದು (Hemolytic Anemia) ವರ್ಣದ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದರ ಪ್ರಮಾಣ ಹೆಚ್ಚಾಗಿಲ್ಲದಿರುವುದರಿಂದ ನಮ್ಮ ಕಣ್ಣಿಗೆ ಕಾಣಿಸದೆ ಇರಬಹುದು. ಆದರೆ ರಕ್ತದಲ್ಲಿ ಹೆಚ್ಚಾಗಿರುವುದು ಗೊತ್ತಾಗುತ್ತದೆ. ಇದರಿಂದ ಮುಖ್ಯವಾಗಿ ರಕ್ತ ಹೀನತೆಯಾಗುವುದು.
2. ಎರಡನೇ ಮತ್ತು ಪ್ರಮುಖ ಕಾರಣ – ಯಕೃತ್ ನಲ್ಲಿ ಸೋಂಕು ರೋಗ ಉಂಟಾಗಿ ಅಲ್ಲಿ ಊರಿಯೂತ (Hepatitis) ಉಂಟಾಗುತ್ತದೆ. ಆಗ ಪಿತ್ತಕಣಗಳಲ್ಲಿರುವ ಮೂಲ ಮತ್ತು ಮಾರ್ಪಟ್ಟ ಪಿತ್ತವರ್ಣ ಮಸ್ತುಗಳೆರಡೂ ರಕ್ತಕ್ಕೆ ಸೋರಿಕೆಯಾಗುತ್ತದೆ. ಇದರಿಂದ ಹೆಚ್ಚು ಕಾಮಾಲೆ ಉಂಟಾಗುತ್ತದೆ ಯಕೃತ್ ಸೋಂಕು ರೋಗಗಳು ಮುಖ್ಯವಾಗಿ ವೈರಾಣುಗಳಿಂದ ಬರುತ್ತದೆ. ವೈರಾಣುಗಳು (Hepatitis Virus A, B, C, D, E) , ಗುಂಪಿಗೆ ಸೇರಿದವು ಅವು ಏಕಕಾಳಣ ಪ್ರರಾವಲಂಬಿ ಜೀವಿಗಳು (Unicellular Parasites) ಉದಾಹರಣೆಗೆ ಅಮೀಬಾ ಅಥವಾ ಮಲೇರಿಯಾ ವೈರಾಣುಗಳ ರೀತಿ. ಇವು ಯಕೃತ್ತಿನ ಕಾಮಾಲೆ ಎನ್ನುತ್ತೇವೆ. ಇವಲ್ಲದೆ ಕೆಲವು ರಸಾಯನಿಕ ಮತ್ತು ಔಷಧಗಳಿಂದಲೂ ಸಹ ಯಕೃತ್ತಿನಲ್ಲಿ ಉರಿಯೂತ ಉಂಟಾಗುತ್ತದೆ.
3. ಮೂರನೆಯದಾಗಿ – ಅಡೆತಡೆಯ ಕಾಮಾಲೆ (Obstructive laundice) ಹರಿಯುತ್ತದೆ. ಅಲ್ಲಿಂದ ಪಿತ್ತನಾಳದ ಮುಖಾಂತರ ಸಣ್ಣ ಕರುಳಿಗೆ ಹರಿಯುತ್ತದೆ. ಹೀಗೆ ಹರಿಯುವಾಗ ಪಿತ್ತನಾಳದಲ್ಲಿ ಅಡತಡೆ ಉಂಟಾದರೆ ಆಗ ಪಿತ್ತರಸದಲ್ಲಿರುವ ಮಾರ್ಪಟ್ಟ ಪಿತ್ತವಸ್ತು ರಕ್ತಕ್ಕೆ ನೇರವಾಗಿ ಹೆಚ್ಚು ಸೋರಿಕೆ ಆಗಿ, ರಕ್ತದಲ್ಲಿ ಈ ಪಿತ್ತವಸ್ತು ಹೆಚ್ಚಾಗಿ ಕಾಮಾಲೆ ಉಂಟಾಗುತ್ತದೆ. ಕೆಲವು ಬಾರಿ ಪಿತ್ತಕೋಶದಲ್ಲಿ ಕಲ್ಲುಗಳು ಉತ್ಪತ್ತಿಯಾಗಿ, ಇವು ಪಿತ್ತನಾಳದಲ್ಲಿ ಹೋಗಿ ತಡೆ ಉಂಟುಮಾಡಿ, ಅಡೆತಡೆಯ ಕಾಮಾಲೆ ಉಂಟಾಗುತ್ತದೆ.
ಇದೂ ಅಲ್ಲದೆ ಪಿತ್ತಕೋಶದಲ್ಲಿ ಉರಿಯೂತ, ಪಿತ್ತಕೋಶದ ಕ್ಯಾನ್ಸರ್, ಮೇದೋಜೀರಕಾಂಗದ ಕ್ಯಾನ್ಸರ್ ಗಳಲ್ಲಿಯೂ ಅಡೆತಡೆಯ ಕಾಮಾಲೆ ಉಂಟಾಗುತ್ತದೆ. ಪಿತ್ತರಸದ ಜೊತೆ ಪಿತ್ತ ಲವಣವೂ ಸಹ ರಕ್ತಕ್ಕೆ ಸೋರಿಕೆಯಾಗುತ್ತದೆ. ಇದರಿಂದ ಕಾಮಾಲೆಯ ಜೊತೆ ಮೈಯಲ್ಲಿ ತುರಿಕೆ, ನವೆ ಉಂಟಾಗುತ್ತದೆ.
ಇವುಗಳಲ್ಲದೆ ಯಕೃತ್ ನಲ್ಲಿ ಧೀರ್ಘಕಾಲ ಉರಿಯೂತವಿದ್ದು, ಅಲ್ಲಿ ಆಗಾಗ ಪಿತ್ತಕಣಗಳು ನಶಿಸುತ್ತಲೇ ಇದ್ದರೆ, ನಾರಿನಂತಹ ಮತ್ತು (Fibres) ಉತ್ಪತ್ತಿಯಾಗುತ್ತದೆ. ಹೀಗಾಗಿ ಯಕೃತ್ತು ಗಟ್ಟಿಯಾಗಿ ಹಾಗೂ ಒರಟಾಗುತ್ತದೆ. (Orrhosis of Liver) ಇದು ಹೆಚ್ಚಾಗಿ ಮದ್ಯಪಾನ ಮತ್ತು ಬಿ.ಸಿ. ಸೋಂಕು ರೋಗಗಳಿಂದ ಯಕೃತ್ತಿನ ಊತ ಸಾಮಾನ್ಯ. ಆದರೆ ಕಾಲನಂತರ ಯಕೃತ್ತಿನ ಕ್ಯಾನ್ಸರ್ ಕೂಡ ಆಗಬಹುದು. ಆಗಲೂ ಕಾಮಾಲೆ ವ್ಯಾಧಿ ಬರಹುದು. ಸಾಮಾನ್ಯವಾಗಿ ಯಕ್ಷತ್ತಿನ ವ್ಯಾಧಿಗಳಲ್ಲಿ ಯಕೃತ್ತು ದೊಡ್ಡದಾಗಿರುತ್ತದೆ. ಉದರ ಪರೀಕ್ಷೆ ಮಾಡಿಸಿದಾಗ ಯಕೃತ್ತು ಹಿಗ್ಗಿರುವುದನ್ನು ಪರಿಶೀಲಿಸಬಹುದು.
ಸಂಭವನೀಯ ಪರಿಣಾಮ – ಸಾಮಾನ್ಯವಾಗಿ ಬಿಲಿರುಬಿನ್ ಅಂಶವು ರಕ್ತದ ಪ್ರತಿ ಡೊಲೀಟರ್ 0.2 ರಿಂದ 1.2 ಮಿಲಿಗ್ರಾಂನಷ್ಟಿರುತ್ತದೆ. ಇದೊಂದು ವಿಷ ಪೂರಿತವಸ್ತು. ಇದು 2.5 ಮಿಲಿಗ್ರಾಂ ಆಗುವವರೆಗೂ ತಿಳಿಯುವುದಿಲ್ಲ, ಪ್ರತಿ ಡೆಸಿಲೀಟರ್ಗೆಗೆ 18 ಮಿಲಿಗ್ರಾಂಗಿಂತಲೂ ಹೆಚ್ಚಾದಾಗ ವ್ಯಕ್ತಿಯ ಜೀಹದಲ್ಲಾಗುವ ಎಲ್ಲಾ ಚಯಾಪಚಯ ಕ್ರಿಯೆಗಳು ಏರುಪೇರಾಗುತ್ತದೆ. ಇದಕ್ಕಿಂತ ಹೆಚ್ಚಿನ ಅಪಾಯ ಎಂದರೆ ಬಿಲಿರುಬಿನ್ ಮೆದುಳನ್ನು ಸುತ್ತುವರೆದು ಇರುವ ಕ್ರಿಯಾತ್ಮಕ ತಡೆಗೋಡೆಯನ್ನು ದಾಟಿ ಮೆದುಳನ್ನು ತಲುಪಿದಾಗ, ನರವ್ಯೂಹದ ಜೀವಕೋಶಗಳ ಮೇಲೆ ಬಿಲಿರುಬಿನ್ ಅಪಾಯಕರ ಪರಿಣಾಮ ಬೀರುತ್ತದೆ. ಇದರಿಂದ ಆ ವ್ಯಕ್ತಿಯು ಸೂಪ್ತಾವಸ್ಥೆಗೆ (ಕೋಮಾ) ಜಾರಬಹುದು ಅಷ್ಟೇ ಅಲ್ಲ, ಉಸಿರಾಟದ ಪ್ರಕ್ರಿಯೆಯಲ್ಲಿ ಏರುಪೇರಾಗಿ, ವೃತ್ತಿಯ ಜೀವಕ್ಕೂ ಅಪಾಯವಾಗಬಹುದು.
ಯಕೃತ್ತಿನ ಉರಿಯೂತದಿಂದ ಕಾಮಾಲೆ ಉಂಟಾಗುತ್ತದೆ. ಯಕೃತ್ತಿನ ಜೀವಕಣಗಳಿಗೆ ಘಾಸಿ ಆಗಿ, ಅವುಗಳಿರುವ ಕಿಣ್ವಗಳು ರಕ್ತಕ್ಕೆ ಸೋರುತ್ತದೆ. (5.G.O.T & SGPT) ಇವುಗಳ ಪ್ರಮಾಣ ಸುಮಾರು 50 ಐವಿ/ಎಲ್ ಗಿಂತ ಕಡಿಮೆ ಇರಬೇಕು. ಇದು ತೀವ್ರತೆಗೆ ತಕ್ಕಂತೆ 60ಕ್ಕೂ ಹೆಚ್ಚಾಗುತ್ತದೆ. (Serun Alkaline phoshphate) ಎಂಬ ಕಿಣ್ವವು ಸಾಮಾನ್ಯ ಸ್ಥಿತಿಯಲ್ಲಿರುತ್ತದೆ. (115 ಐವಿ/ ಎಲ್) ಅಲ್ಲದೆ, ಪಿತ್ತವರ್ಣ ವಸ್ತುವಿನ ಪ್ರಮಾಣ ವ್ಯಾಧಿಗೆ ತಕ್ಕಂತೆ 3-4 ಮಿಲಿಗ್ರಾಂಗಿಂತ ಹೆಚ್ಚಿರುತ್ತದೆ. ಕೆಲವು ವೇಳೆ 10-12 ಮಿಲಿಗ್ರಾಂಗಳಷ್ಟು ತೀವ್ರ ಏರಿಕೆ ಸಂಭವಿಸುತ್ತದೆ. ಮದ್ಯಪಾನದಿಂದ ಉಂಟಾಗುವ ಯಕೃತ್ತಿನ ಉರಿಯೂತದಲ್ಲಿ ಜಿ.ಜಿ.ಟಿ.ಪಿ. ಎಂಬ ಕಿಣ್ವದ ಪ್ರಮಾಣ ರಕ್ತದಲ್ಲಿ 30ಕ್ಕಿಂತ ಹೆಚ್ಚಿರುತ್ತದೆ.
ಕೆಂಪು ರಕ್ತಕಣಗಳು ಹೆಚ್ಚು ನಾಶವಾಗುವುದರಿಂದ ಬರುವ ಕಾಮಾಲೆಯಲ್ಲಿ ಮೂಲ ಪಿತ್ತವರ್ಣದ ವಸ್ತುವಿನ ಪ್ರಮಾಣ ಮಾತ್ರ ಹೆಚ್ಚಾಗಿರುತ್ತದೆ. ಆಗ ಕಿಣ್ವಗಳ ಪ್ರಮಾಣ ಸಾಮಾನ್ಯ ಸ್ಥಿತಿಯಲ್ಲಿರುತ್ತದೆ. ಅಡೆತಡೆ ಕಾಮಾಲೆಯಲ್ಲಿ ಪಿತ್ತವರ್ಣವಸ್ತುವಿನ ಪ್ರಮಾಣ ಅದರಲ್ಲಿಯೂ ಮಾರ್ಪಟ್ಟ ಪಿತ್ತವರ್ಣವಸ್ತು ವಿನ ಪ್ರಮಾಣ ಬಹಳ ಹೆಚ್ಚಾಗಿರುತ್ತದೆ.
ಆದ್ದರಿಂದ ಯಾವುದೇ ವ್ಯಕ್ತಿಗೆ ಕಾಮಾಲೆ (ಜಾಂಡೀಸ್) ಕಾಣಿಸಿಕೊಂಡಾಗ ಅದು ಲಿಂಗ, ಜೀವನಶೈಲಿ ಹಾಗೂ ವ್ಯಕ್ತಿಯಲ್ಲಿ ಕಂಡುಬರುವ ಇತರ ಗುಣಲಕ್ಷಣಗಳನ್ನು ಪರಿಶೀಲಿಸಿ, ವಿವಿಧ ವೈದ್ಯಕೀಯ ಪರೀಕ್ಷೆಗಳ ಸಹಾಯದಿಂದ ಮಾತ್ರ ಜಾಂಡೀಸ್ ಹಿಂದಿರುವ ಕಾರಣ ಹುಡುಕಲು ಸಾಧ್ಯ. ಮುಖ್ಯವಾಗಿ ರಕ್ತದ ಮಾದರಿಯಲ್ಲಿ ವೈರಾಣು ಮತ್ತು ಸೂಕ್ಷ್ಮಾಣು ತಪಾಸಣೆ ಪಿತ್ತಜನಕಾಂಗ, ಪಿತ್ತಕೋಶ, ಪಿತ್ತನಾಳ ಗಳಲ್ಲಿ ದೋಷಗಳನ್ನು ಕ್ಯಾನ್ಸರ್ ಗಡ್ಡೆಗಳನ್ನು ಯಕೃತ್ತಿನಲ್ಲಿ ಕೀವು ತುಂಬಿರುವುದು, ಯಕೃತ್ತು ಗಡಸಾಗಿ ಇರುವುದು ಪತ್ತೆ ಹಚ್ಚಲು ಅ ಲ್ಟ್ರಾಸೌಂಡ್ ಸ್ಕ್ಯಾನಿಂಗ್ ಪರೀಕ್ಷೆಯಿಂದ ತಿಳಿಯಬಹುದು.














