ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) ಅವರನ್ನು ಪೊಲೀಸ್ ಇನ್ಸ್ ಪೆಕ್ಟರ್ (ಸಿವಿಲ್) ಹುದ್ದೆಗೆ ಕೆಸಿಎಸ್ ನಿಯಮ 32 ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ ಸ್ಥಳ ನಿಯುಕ್ತಿಗೊಳಸಿಲಾಗಿರುತ್ತದೆ. ಅವರನ್ನು ಪ್ರಸ್ತುತ ಪಿ ಐ (ಸಿವಿಲ್) ಹುದ್ದೆಯ ವೇತನ ಶ್ರೇಣಿ ರೂ.63,250 ರಿಂದ 1,34200 ರಲ್ಲಿ ಭವಿಷ್ಯವರ್ತಿಯಾಗಿ ಕ್ರಮಬದ್ದ ಮುಂಬಡ್ತಿಗೊಳಿಸಿ ಅವರು ಪ್ರಸ್ತುತ ಸ್ವತಂತ್ರ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸಲಾಗಿದೆ.
ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಭಾರ ಪಿಐ ಗಣೇಶ್ ಜೆ.ಹೆಚ್ ಅವರನ್ನು ಸದರಿ ಸ್ಥಳದಲ್ಲಿಯೇ ಮುಂದುವರೆಸಲಾಗಿದೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಸ್ ಐ ಸುನೀಲ್ ಎಸ್.ಪಿ ಅವರನ್ನು ಮಾಜಿ ಪ್ರಧಾನ ಮಂತ್ರಿಗಳ ಕುಟುಂಬ ಭದ್ರತೆಗೆ ನಿಯುಕ್ತಿಗೊಳಿಸಲಾಗಿದೆ. ವರುಣ ಪೊಲೀಸ್ ಠಾಣೆಯ ಪಿಎಸ್ ಐ ಚೇತನ್ ವಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ, ಸರಗೂರು ಪೊಲೀಸ್ ಠಾಣೆಯ ಪಿಎಸ್ ಐ ನಂದೀಶ್ ಕುಮಾರ್ ಸಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ನಿಯುಕ್ತಿಗೊಳಿಸಲಾಗಿದೆ.
ಒಟ್ಟು 181 ಮಂದಿ ಪಿಎಸ್ಐ (ಸಿವಿಲ್) ಅವರಿಗೆ ಮುಂಬಡ್ತಿ ನೀಡಲಾಗಿದ್ದು, ಅವರ ಮಾಹಿತಿ ಇಂತಿದೆ.














