ಮನೆ ಅಪರಾಧ ಕುಷ್ಟಗಿ: ಪಟ್ಟಣದ ಹೊರವಲಯದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಕಳವು

ಕುಷ್ಟಗಿ: ಪಟ್ಟಣದ ಹೊರವಲಯದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಕಳವು

0

ಕುಷ್ಟಗಿ: ಪಟ್ಟಣದ ಹೊರವಲಯದಲ್ಲಿ ನಿಲ್ಲಿಸಿದ್ದ ಟಿಪ್ಪರ್ ವಾಹನ ಮೇ. 13ರ ಮಧ್ಯರಾತ್ರಿ ಕಳುವಾಗಿದೆ.

Join Our Whatsapp Group

ಕುಷ್ಟಗಿಯ ಧರ್ಮರಾಜ್ ಹನಮಂತಪ್ಪ ಮೇಲಿನಮನಿ ಮಾಲೀಕತ್ವದ ಟಿಪ್ಪರ್ ವಾಹನವನ್ನು ವಾರ್ಡ್ ನಂ.23ರ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗೆ ಹೊಂದಿಕೊಂಡ ಅವರ ಸ್ವಂತ ಜಾಗದಲ್ಲಿ ನಿಲ್ಲಿಸಿದ್ದರು. ಕೀ ಡೈರೆಕ್ಟ್ ಮಾಡಿ ವಾಹನ ಅಪಹರಿಸಿದ್ದಾರೆ.

ಈ ಪ್ರಕರಣ ಬಳಿಕ ಸುತ್ತಮುತ್ತಲಿನ ಟೋಲ್ ಗಳ ಸಿಸಿ ಕ್ಯಾಮರಾ ಪರೀಕ್ಷಿಸಲಾಗಿದ್ದು ಯಾವುದೇ ಸುಳಿವು ಪತ್ತೆಯಾಗದ ಹಿನ್ನೆಲೆ ಮಾಲಕ ಕುಷ್ಟಗಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

2018 ರ ಮಾಡೆಲ್ ವಾಹನ ಇದಾಗಿದ್ದು, 15 ಲಕ್ಷ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.

ಹಿಂದಿನ ಲೇಖನಪತಿಯ ಸಾವಿನಿಂದಾಗಿ ವಿಚ್ಛೇದನ ಡಿಕ್ರಿ ಪ್ರಶ್ನಿಸಿರುವ ಪತ್ನಿಯ ಮೇಲ್ಮನವಿ ರದ್ದಾಗದು: ಹೈಕೋರ್ಟ್‌
ಮುಂದಿನ ಲೇಖನಮೇ 31ಕ್ಕೆ ನೈರುತ್ಯ ಮುಂಗಾರು ಪ್ರವೇಶ: ವಾಡಿಕೆಗಿಂತ ಹೆಚ್ಚು ವರ್ಷಧಾರೆ ಸಾಧ್ಯತೆ