ಮನೆ ಉದ್ಯೋಗ ಚಾಮರಾಜನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ಹುದ್ದೆಗೆ ನೇಮಕಾತಿ

ಚಾಮರಾಜನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ಹುದ್ದೆಗೆ ನೇಮಕಾತಿ

0

ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 219 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

Join Our Whatsapp Group

ಹುದ್ದೆ ವಿವರ

ಅಂಗನವಾಡಿ ಕಾರ್ಯಕರ್ತರು – 77

ಅಂಗನವಾಡಿ ಸಹಾಯಕಿಯರು – 142

ಜಿಲ್ಲಾ ವ್ಯಾಪ್ತಿಯ ಸಂತೇಮರಹಳ್ಳಿ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು, ಕೊಳ್ಳೆಗಾಲ, ಹನೂರಿನಲ್ಲಿ ಹುದ್ದೆಗಳ ಭರ್ತಿ ಮಾಡಲಾಗಿದೆ.

ವಿದ್ಯಾರ್ಹತೆ:

ಅಂಗನವಾಡಿ ಕಾರ್ಯಕರ್ತರ ಹುದ್ದೆಗೆ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು.

ಅಂಗನವಾಡಿ ಸಹಾಯಕರ ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಗ್ರಾಮ/ತಾಲೂಕು, ನಗರದ ಖಾಯಂ/3 ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಅಲ್ಲಿಯ ನಿವಾಸಿಯಾಗಿರಬೇಕು.

ವಯೋಮಿತಿ: ಕನಿಷ್ಠ 19ರಿಂದ 35 ವರ್ಷ. ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಆಯ್ಕೆ: ಮೆರಿಟ್,​ ಸಂದರ್ಶನದ ಮೂಲಕ ಆಯ್ಕೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು karnemakaone.kar.nic.in/abcd/ApplicationForm_JA_org.aspx ಇಲ್ಲಿಗೆ ಭೇಟಿ ನೀಡಿ.

ಈ ಹುದ್ದೆಗೆ ಜನವರಿ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಫೆಬ್ರವರಿ 7 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಕುರಿತು karnemakaone.kar.nic.in ಭೇಟಿ ನೀಡಬಹುದಾಗಿದೆ.