ಮೈಸೂರು: ರಾಜ್ಯದಲ್ಲಿ ಕಳೆದ ದಿನಗಳಿಂದ ಸಾಲು – ಸಾಲು ದರೋಡೆ ಪ್ರಕರಣಗಳು ನಡೆಯುತ್ತಿದೆ. ಬೀದರ್ ನ ಎಟಿಎಂ ರಾಬರಿ ಆಯ್ತು, ಮಂಗಳೂರಿನ ಬ್ಯಾಂಕ್ ರಾಬರಿ ಬಳಿಕ ಇದೀಗ ಮೈಸೂರಿನಲ್ಲಿ ಹಾಡಹಗಲೇ ರೋಡ್ ರಾಬರಿಯಾಗಿದೆ.
ಮೈಸೂರು ಜಿಲ್ಲೆ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಘಟನೆ ನಡೆದಿದ್ದು, ಮುಸುಕುಧಾರಿಗಳು ಕಾರು ಅಡ್ಡಗಟ್ಟಿ ರಾಬರಿ ನಡೆಸಿದ್ದಾರೆ.
ಎರಡು ಕಾರಿನಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು ಇನ್ನೋವಾ ಕಾರು ಅಡ್ಡಗಟ್ಟಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಹಣದ ಜೊತೆಗೆ ವ್ಯಕ್ತಿಯ ಕಾರನ್ನೂ ತೆಗೆದುಕೊಂಡು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.
ಜಯಪುರ ಪೊಲೀಸರು ತನಿಖೆ ಆರಂಭವಾಗಿದೆ.














