ಮನೆ ಸ್ಥಳೀಯ ಮತದಾನದ ಮಹತ್ವ ಸಾರಲು ಪರಿಣಾಮಕಾರಿ ಜನ ಜಾಗೃತಿ  ಕಾರ್ಯಕ್ರಮ ಆಯೋಜನೆ ಅವಶ್ಯಕ: ಬಿ.ಜಿ.ದಿನೇಶ್

ಮತದಾನದ ಮಹತ್ವ ಸಾರಲು ಪರಿಣಾಮಕಾರಿ ಜನ ಜಾಗೃತಿ  ಕಾರ್ಯಕ್ರಮ ಆಯೋಜನೆ ಅವಶ್ಯಕ: ಬಿ.ಜಿ.ದಿನೇಶ್

0

ಮೈಸೂರು: ರಾಷ್ಟ್ರೀಯ ಮತದಾನ ದಿನವನ್ನು ಜನವರಿ 25 ರಂದು ಆಚರಣೆ ಮಾಡಲಾಗುತ್ತದೆ. ಪ್ರಜಾಪ್ರಭುತ್ವ ಉಳಿವಿಗೆ ಕಡ್ಡಾಯ ಮತದಾನ ಮಾಡಬೇಕು. ಮತದಾನದ ಮಹತ್ವ ಸಾರಲು ಪರಿಣಾಮಕಾರಿ ಜನ ಜಾಗೃತಿ ಕಾರ್ಯಕ್ರಮ ಮಾಡಬೇಕು ಎಂದು  ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ಅವರು ಹೇಳಿದರು.

Join Our Whatsapp Group

ಇಂದು ಮೈಸೂರು ಮಹಾನಗರ ಪಾಲಿಕೆಯ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ನಡೆದ ಮತದಾರರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ  ‌ಮಾತನಾಡಿದರು.

ತಾಂತ್ರಿಕತೆ ಮುಂದುವರೆದಂತೆ ಪ್ರಜಾಪ್ರಭುತ್ವ ಗಟ್ಟಿಯಾಬೇಕು. ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮ ನಡೆಯುತ್ತದೆ. ಚುನಾವಣೆ ವೇಳೆ ಮತ್ತಷ್ಟು ಪರಿಣಾಮಕಾರಿ ಜಾಗೃತಿ ಮಾಡಿದರೂ ಮತದಾನ ಆಗುವ ಸಂಖ್ಯೆ ಕಡಿಮೆ ಇದೆ. ಪೂರ್ಣ ಪ್ರಮಾಣದ ಮತದಾನ ಆಗುತ್ತಿಲ್ಲ. ಈ ಬಗ್ಗೆ ಮತದಾರರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಶಿಕ್ಷಣ ಜಾಸ್ತಿ‌ ಆದರೂ ಮತದಾನ ಮಾಡುವರ ಸಂಖ್ಯೆ ಕಡಿಮೆ ಆಗುತ್ತಿದೆ. ಮನ: ಸಾಕ್ಷಿಗೆ ತಕ್ಕಂತೆ ಮತದಾನ ಮಾಡಬೇಕು. ಜಾತಿ, ಧರ್ಮ, ಉಪ ಜಾತಿ, ಪಂಗಡ, ಸ್ಥಳಿಯರೆಂಬ ಲೆಕ್ಕಾಚಾರ ಮಾಡಬಾರದು. ನೈತಿಕ ಮತದಾನ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಅಂಕ, ಸರ್ಟಿಫಿಕೇಟ್ ‌ಆಧಾರದ ಮೇಲೆ ನಾವು ಮಕ್ಕಳ ವಿಧ್ಯಾಭ್ಯಾಸ ಮಾಡಿಸುತ್ತಿದ್ದೇವೆ ಆದರೆ ನಿಜವಾದ ಮಾನವೀಯ ಮೌಲ್ಯಗಳನ್ನು ತಿಳಿಸಬೇಕು

ಮೊಬೈಲ್ ಬಂದು ಟಿವಿ ಕೂಡ ನೋಡುತ್ತಿಲ್ಲ ಫೇಸ್ ಬುಕ್, ಇನ್ಟ್ರಾಗ್ರಾಂ ಸೇರಿದಂತೆ ಸೋಷಿಯಲ್‌ ಮೀಡಿಯಾ ದಾಸರಾಗುತ್ತಿದ್ದಾರೆ. ಮಕ್ಕಳನ್ನು ಈ ಪಿಡುಗಿನಿಂದ ಹೊರ ತರಬೇಕು ಎಂದು ತಿಳಿಸಿದರು.

ಇದೇ‌ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಡಾ ಪಿ. ಶಿವರಾಜು ಅವರು ತನ್ನ ತಪ್ಪು ‌ಮುಚ್ಚಿಟ್ಡುಕೊಂಡು‌ ಎದುರಿನ ವ್ಯಕ್ತಿ ತಪ್ಪು ಗುರುತಿಸಿ ಹೇಳುವುದು ಸ್ವಾಭಾವಿಕವಾಗಿದೆ. ನಾವು ಪ್ರಬುದ್ಧರಾಗುತ್ತಾ ಜವಾಬ್ದಾರಿ ಅರಿತು, ನಮ್ಮ ತಪ್ಪು ನಾವು ತಿದ್ದಿಕೊಳ್ಳಬೇಕುಚುನಾವಣಾ ವ್ಯವಸ್ಥೆ ಟೀಕೆ ಮಾಡುತ್ತೇವೆ.

ಪ್ರಜಾಪ್ರಭುತ್ವ ಯಶಸ್ವಿಯಾಗಲು ನಾವು ಚುನಾವಣೆಯಲ್ಲಿ ಮತದಾನ ಮಾಡಬೇಕು ಮತದಾನಕ್ಕೆ ರಜೆ ಕೊಟ್ಟರೆ ಟೂರ್ ಗೆ ಹೋಗುತ್ತಾರೆ ಲಕ್ಷಾಂತರ ರೂಪಾಯಿ ವೇತನ ಪಡೆಯುವರೆ ಮತದಾನ ಮಾಡದೆ ಬೇರೆಯವರಿಗೆ ಪಾಠ ಮಾಡುತ್ತಾರೆ. ಮತದಾನ ಮಾಡವ ಘಳಿಗೆ ಸಂಭ್ರಮದಲ್ಲಿರಬೇಕು ಈ‌ ಮೂಲಕ ಕಡ್ಡಾಯವಾಗಿ ಮತದಾನ ಮಾಡಬೇಕು.ಮಕ್ಕಳು ತಂದೆ ತಾಯಿ‌ ಜೊತೆ ಹೋಗಿ ‌ಮತದಾನ ಮಾಡಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮತದಾನ ದ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.  ಯುವ ಮತದಾರರಿಗೆ ಚುನಾವಣಾ ಗುರುತಿನ ಚೀಟಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಪಾಲಿಕೆಯ ಉಪ ಆಯುಕ್ತ ಡಾ.ದಾಸೇಗೌಡ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಹಾಗೂ  ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ ಅವರು ಉಪಸ್ಥಿತರಿದ್ದರು.