ಮನೆ ರಾಷ್ಟ್ರೀಯ ಗರಿಷ್ಠ ಬಡ್ಡಿ ದರದ ವಿವರ ಕೊಡಿ : ಎನ್ ​ಬಿಎಫ್ ​ಸಿಗಳಿಗೆ ಆರ್​ಬಿಐ ನಿರ್ದೇಶನ

ಗರಿಷ್ಠ ಬಡ್ಡಿ ದರದ ವಿವರ ಕೊಡಿ : ಎನ್ ​ಬಿಎಫ್ ​ಸಿಗಳಿಗೆ ಆರ್​ಬಿಐ ನಿರ್ದೇಶನ

0

ನವದೆಹಲಿ, ಫೆಬ್ರುವರಿ 6: ತಮ್ಮ ಗ್ರಾಹಕರಿಗೆ ಗರಿಷ್ಠ ಬಡ್ಡಿದರ ವಿಧಿಸುತ್ತೀರಿ ಎಂದು ವಿವರ ಕೊಡಿ ಎಂದು ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್​ಬಿಎಫ್​ಸಿ) ಆರ್​ಬಿಐ ನಿರ್ದೇಶನ ನೀಡಿದೆ.

Join Our Whatsapp Group

 ಪ್ರತಿಯೊಂದು ವಿಭಾಗದ ಸಾಲಕ್ಕೂ ಗರಿಷ್ಠ ಬಡ್ಡಿದರ ಎಷ್ಟು ಎಂಬುದನ್ನು ಈ ಹಣಕಾಸು ಸಂಸ್ಥೆಗಳು ಆರ್​ಬಿಐಗೆ ತಿಳಿಸಬೇಕಾಗಿದೆ. ಬಡ್ಡಿದರ, ಇನ್ಷೂರೆನ್ಸ್, ಪ್ರೋಸಸಿಂಗ್ ಫೀಸ್ ಇತ್ಯಾದಿ ಯಾವುದೇ ವೆಚ್ಚಗಳು ಸೇರಿ ಗರಿಷ್ಠ ದರವನ್ನು ಎನ್​ಬಿಎಫ್​ಸಿಗಳು ನಿರ್ದಿಷ್ಟಪಡಿಸಬೇಕು. ಅಡಮಾನ ಸಾಲ, ವಾಹನ ಸಾಲ, ಚಿನ್ನದ ಸಾಲ, ಶಿಕ್ಷಣ ಸಾಲ ಇತ್ಯಾದಿ ಬೇರೆ ಬೇರೆ ಸಾಲ ವಿಭಾಗದಲ್ಲಿ ಗರಿಷ್ಠ ದರವನ್ನು ಈ ಹಣಕಾಸು ಸಂಸ್ಥೆಗಳು ತಿಳಿಸಬೇಕು. ಇಲ್ಲಿ ಎನ್​ಬಿಎಫ್​ಸಿಗಳು ತಮ್ಮ ಗರಿಷ್ಠ ಬಡ್ಡಿದರಗಳಿಗೆ ಮಂಡಳಿಯ ಅನುಮೋದನೆ ಪಡೆಯುವುದು ಅಗತ್ಯ ಎಂದೂ ಆರ್​ಬಿಐ ಸೂಚಿಸಿದೆ.

ಮೈಕ್ರೋಫೈನಾನ್ಸ್ ಸಂಸ್ಥೆಗಳು, ಎನ್​ಬಿಎಫ್​​ಸಿಗಳು ಹಾಗೂ ಕೆಲ ಬ್ಯಾಂಕ್​ಗಳು ಕೆಲ ಗ್ರಾಹಕರಿಂದ ಸಿಕ್ಕಾಪಟ್ಟೆ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿರುವ ಆರೋಪಗಳು ಸಾಕಷ್ಟು ಕೇಳಿಬಂದಿವೆ. ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್​ನವರ ಉಪಟಳದಿಂದ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು, ಹಲವು ಕುಟುಂಬಗಳು ಊರು ಬಿಟ್ಟು ಹೋಗಿರುವುದು ಇತ್ಯಾದಿ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಆರ್​ಬಿಐನ ಈ ನಡೆ ಕುತೂಹಲ ಮೂಡಿಸಿದೆ.

ಕಡಿಮೆ ಕ್ರೆಡಿಟ್ ಸ್ಕೋರ್, ಅಡಮಾನಕ್ಕೆ ಆಸ್ತಿ ಇಲ್ಲದಿರುವುದು ಇತ್ಯಾದಿ ಕಾರಣಕ್ಕೆ ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಬಹಳಷ್ಟು ಜನರಿಗೆ ಸಾಲ ಸಿಗುವುದಿಲ್ಲ. ಇಂಥವರು ಎನ್​ಬಿಎಫ್​ಸಿ, ಮೈಕ್ರೋಫೈನಾನ್ಸ್ ಇತ್ಯಾದಿ ಸಂಸ್ಥೆಗಳತ್ತ ಎಡತಾಕುತ್ತಾರೆ. ಇಲ್ಲಿ ಹೆಚ್ಚು ಸುಲಭವಾಗಿ ಸಾಲ ಸಿಗುತ್ತದಾದರೂ ಬಡ್ಡಿದರವೂ ಅತ್ಯಧಿಕ ಇರುತ್ತದೆ ಎನ್ನುವ ಆರೋಪ ಇದೆ

ಕ್ರೆಡಿಟ್ ಸ್ಕೋರ್ ಸರಿ ಇಲ್ಲದ ವ್ಯಕ್ತಿಗೆ ಸಾಲ ಕೊಡುವುದು ಯಾವುದೇ ಹಣಕಾಸು ಸಂಸ್ಥೆಗಾದರೂ ಅಪಾಯ ಇರುವ ಸಂಗತಿ. ಸಾಲ ಮರಳಿಸದಿರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಇಂಥವರಿಗೆ ಹೆಚ್ಚಿನ ಬಡ್ಡಿದರ ಹಾಕಲಾಗಿರುತ್ತದೆ. ಇಷ್ಟೇ ಬಡ್ಡಿಮಿತಿ ಇರಬೇಕು ಎಂದು ಆರ್​ಬಿಐ ಕೂಡ ತಾಕೀತು ಮಾಡಲು ಆಗುವುದಿಲ್ಲ. ಭಾರತದಲ್ಲಿ ಬ್ಯಾಂಕುಗಳು ತಮ್ಮದೇ ಬಡ್ಡಿದರ ನಿಗದಿ ಮಾಡಿಕೊಳ್ಳಲು ಸ್ವತಂತ್ರ ಇರುತ್ತವೆ. ಆದರೂ ಕೂಡ ಬ್ಯಾಂಕುಗಳಿಗೆ ಯಜಮಾನನಾಗಿರುವ ಆರ್​ಬಿಐ, ಇವುಗಳತ್ತ ಒಂದು ಕಣ್ಣಿಡುವುದು ಅನಿವಾರ್ಯವಾಗಿರುತ್ತದೆ.