ಮನೆ ಅಪರಾಧ ಕೆಎಸ್’ಆರ್’ಟಿಸಿ ಬಸ್ ಪಲ್ಟಿ: 25 ಮಂದಿಗೆ ಗಾಯ

ಕೆಎಸ್’ಆರ್’ಟಿಸಿ ಬಸ್ ಪಲ್ಟಿ: 25 ಮಂದಿಗೆ ಗಾಯ

0

ಶಿರಾ: ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಸಮೀಪ ಶುಕ್ರವಾರ ಕೆಎಸ್’ಆರ್’ಟಿಸಿ ಬಸ್ ಪಲ್ಟಿಯಾದ ಪರಿಣಾಮ ಸುಮಾರು 25 ಮಂದಿ ಗಾಯಗೊಂಡಿದ್ದಾರೆ.

ತಾಲ್ಲೂಕಿನ ತಾಳಗುಂದ ಗ್ರಾಮದಿಂದ ಶಿರಾಗೆ ಬರುತ್ತಿದ್ದ ಬಸ್ ಅರೇಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಬಸ್ ನಲ್ಲಿದ್ದ ಸುಮಾರು 25 ಮಂದಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಚಿಕ್ಕಗೂಳ ಗ್ರಾಮದ ನಾಗಮ್ಮ, ಸಿದ್ದಗಂಗಪ್ಪ ಹಾಗೂ ಬಡವನಹಳ್ಳಿ ಗ್ರಾಮದ ಹೊನ್ನಪ್ಪ ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಉಳಿದವರಿಗೆ ಶಿರಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಿಂದಿನ ಲೇಖನಎಚ್’ಡಿಕೆ ಕುಟುಂಬ ಸರ್ಕಾರಿ ಭೂ ಕಬಳಿಕೆ ಆರೋಪ: ಮುಖ್ಯ ಕಾರ್ಯದರ್ಶಿ ಖುದ್ದು ಹಾಜರಾಗುವಂತೆ ಸೂಚಿಸಿದ ಹೈಕೋರ್ಟ್
ಮುಂದಿನ ಲೇಖನಹಾಸನ: ಎಚ್‌3ಎನ್‌2 ವೈರಸ್’ಗೆ ನಿಂದ ಮೊದಲ ಸಾವು: ಆತಂಕ