ಮನೆ ಅಪರಾಧ ಹಳಿ ಮೇಲೆ ನಡೆದುಕೊಂಡು ಬರುತ್ತಿದ್ದ ಯುವಕರ ಮೇಲೆ ಹರಿದು ರೈಲು: ಮೂವರ ಸಾವು

ಹಳಿ ಮೇಲೆ ನಡೆದುಕೊಂಡು ಬರುತ್ತಿದ್ದ ಯುವಕರ ಮೇಲೆ ಹರಿದು ರೈಲು: ಮೂವರ ಸಾವು

0

ದೊಡ್ಡಬಳ್ಳಾಪುರ: ಕೆಲಸ ಮುಗಿಸಿಕೊಂಡು ಟ್ರ್ಯಾಕ್ ಮೇಲೆ ನಡೆದುಕೊಂಡು ಬರುತ್ತಿದ್ದ ಮೂವರು ಯುವಕರ ಮೇಲೆ ರೈಲು ಹರಿದ ದಾರುಣ ಘಟನೆ ದೊಡ್ಡಬಳ್ಳಾಪುರ ನಗರದ ಮುತ್ತೂರು ಬಳಿ ನಡೆದಿದೆ. ಘಟನೆಯಲ್ಲಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Join Our Whatsapp Group

ರಾಹುಲ್, ಲಲ್ಲನ್ ಮತ್ತು ಬಿಕೇಶ್ ಎಂಬ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಯುವಕರು ಉತ್ತರ ಪ್ರದೇಶ ಮೂಲದವರಾಗಿದ್ದಾರೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದ ಮುತ್ತೂರಿನಲ್ಲಿ ವಾಸವಾಗಿದ್ದ ಮೂವರು ಯುವಕರು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಕೊನ್ನಘಟ್ಟ ಗ್ರಾಮದಲ್ಲಿ ಕೆಲಸ ಮುಗಿಸಿದ ಮೂವರು ಸ್ನೇಹಿತರು ಜೊತೆಯಲ್ಲಿಯೇ ಆಟೋದಲ್ಲಿ ಬಂದು ಜಗದೀಶ್ ವೃತ್ತದಲ್ಲಿ ಇಳಿದಿದ್ದರು. ಅಲ್ಲಿಂದ ಮನೆಗೆ ರೈಲ್ವೆ ಹಳೆಯ ಮೇಲೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಆಯತಪ್ಪಿ ರೈಲು ಹಳಿಗಳ ಮೇಲೆ ಬಿದ್ದಾಗ ಪುಟ್ಟಪರ್ತಿ-ಬೆಂಗಳೂರು ರೈಲು ಯುವಕರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ.

ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಶವಗಾರಕ್ಕೆ ರವಾನೆ ಮಾಡಲಾಗಿದೆ.