ಕೊಚ್ಚಿ: ಕೇರಳದ ಕೊಚ್ಚಿಯಲ್ಲಿರುವ ಕೇಂದ್ರ ಅಬಕಾರಿ ಅಧಿಕಾರಿಗಳ ವಸತಿ ಸಮುಚ್ಚಯದಲ್ಲಿ ಮೂರು ಕೊಳೆತ ಶವಗಳು ಪತ್ತೆಯಾಗಿವೆ.
ಕೊಚ್ಚಿಯ ಕಕ್ಕನಾಡ್ನಲ್ಲಿರುವ ಸಮುಚ್ಚಯದಲ್ಲಿ ಶವ ಸಿಕ್ಕಿದ್ದು, ಮೃತರನ್ನು ಹಿರಿಯ ಕಸ್ಟಮ್ಸ್ ಅಧಿಕಾರಿ, ಅವರ ಸಹೋದರಿ ಮತ್ತು ತಾಯಿ ಎಂದು ಶಂಕಿಸಲಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಭಾವಿಸಲಾಗಿದೆ. ಶವಗಳ ತೀವ್ರವಾಗಿ ಕೊಳೆತ ಸ್ಥಿತಿಯಿಂದಾಗಿ ಗುರುತಿಸುವುದು ಕಷ್ಟಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮುಚ್ಚಯ ಲಾಕ್ ಆಗಿತ್ತು, ಗಂಟೆಗಳ ಪ್ರಯತ್ನದ ನಂತರ ಅಧಿಕಾರಿಗಳು ಕಟ್ಟಡದ ಸುತ್ತಮುತ್ತಲು ಪರಿಶೀಲಿಸಿದರು. ಅಲ್ಲಿ ವಾಸಿಸುವ ಅಧಿಕಾರಿ ಕೆಲವು ದಿನಗಳಿಂದ ರಜೆಯಲ್ಲಿದ್ದರು. ಆದರೆ ಅವರು ಕೆಲಸಕ್ಕೆ ಮರಳದಿದ್ದಾಗ ಅಹೋದ್ಯೋಗಿಗಳು ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಅವರು ಕಿಟಕಿಯ ಮೂಲಕ ನೋಡಿದಾಗ ಶವ ನೇತಾಡುತ್ತಿರುವುದು ಕಂಡುಬಂದಿದೆ. ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲಾಯಿತು. ಅವರು ಮನೆಗೆ ಬಂದಾಗ ಮತ್ತೊಂದು ಕೋಣೆಯಲ್ಲಿ ಇನ್ನೊಂದು ಶವ ಇರುವುದು ಕಂಡುಬಂದಿದೆ. ನಂತರದ ಹುಡುಕಾಟಗಳಲ್ಲಿ ಮತ್ತೊಂದು ಕೋಣೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ಅಧಿಕಾರಿಯ ತಾಯಿಯದ್ದಾಗಿರಬಹುದು ಎಂದು ಶಂಕಿಸಲಾಗಿದೆ. ಒಟ್ಟು ಮೂರು ಶವಗಳು ಪತ್ತೆಯಾಗಿವೆ.
ಕುಟುಂಬವು ಕಳೆದ ಒಂದೂವರೆ ವರ್ಷದಿಂದ ಸಮುಚ್ಚಯದಲ್ಲಿ ವಾಸಿಸುತ್ತಿತ್ತು, ಆದರೆ ನೆರೆಹೊರೆಯವರೊಂದಿಗೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಕೊಳೆತ ದೇಹಗಳು ಪ್ರದೇಶದಲ್ಲಿ ತೀವ್ರ ದುರ್ವಾಸನೆ ಬೀರುತ್ತಿದ್ದು, ಅನುಮಾನಗಳನ್ನು ಹುಟ್ಟುಹಾಕಿದೆ. ಎಲ್ಲರ ಸಾವು ಆತ್ಮಹತ್ಯೆಯೇ ಎಂಬುದನ್ನು ತಿಳಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸಮುಚ್ಚಯದಲ್ಲಿ ಕ್ವಾರ್ಟರ್ಸ್ನಲ್ಲಿ ವಿಧಿವಿಜ್ಞಾನ ತಂಡದ ಪರಿಶೀಲನೆ ನಡೆಯುತ್ತಿದೆ ಎಂದು ಅವರು ಹೇಳಿದರು.














