ಮನೆ ಸುದ್ದಿ ಜಾಲ ಜ.31ರಿಂದ ನೈಟ್ ಕರ್ಫ್ಯೂ ರದ್ದು: ಸೋಮವಾರದಿಂದ ಬೆಂಗಳೂರಿನ ಶಾಲೆಗಳು ಓಪನ್

ಜ.31ರಿಂದ ನೈಟ್ ಕರ್ಫ್ಯೂ ರದ್ದು: ಸೋಮವಾರದಿಂದ ಬೆಂಗಳೂರಿನ ಶಾಲೆಗಳು ಓಪನ್

0

ಬೆಂಗಳೂರು: ಕೊರೋನಾ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಜಾರಿ ಮಾಡಲಾಗಿದ್ದ ನೈಟ್ ಕರ್ಫ್ಯೂವನ್ನ ಜನವರಿ 31 ರಿಂದ ರದ್ದುಗೊಳಿಸಲಾಗಿದೆ.

ಕೋವಿಡ್ ನಿರ್ವಹಣೆ ಮತ್ತು ನಿಯಮ ಸಡಿಲಿಕೆ ಸಂಬಂಧ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್,  ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಜಾರಿಗೊಳಿಸಲಾಗಿದ್ದ ನೈಟ್ ಕರ್ಪ್ಯೂವನ್ನು  ರದ್ದುಪಡಿಸಲಾಗಿದೆ. ಜನವರಿ 31 ರಿಂದ ನೈಟ್ ಕರ್ಫ್ಯೂ ಇರುವುದಿಲ್ಲ. ಹಾಗೆಯೇ ಸೋಮವಾರದಿಂದ ಬೆಂಗಳೂರಿನಲ್ಲಿ ಎಲ್ಲಾ ಶಾಲೆಗಳು ಪುನಾರಂಭಗೊಳ್ಳಲಿವೆ. ಇದಲ್ಲದೇ ಹೋಟೆಲ್, ರೆಸ್ಟೋರೆಂಟ್, ಪಬ್ ಗಳಲ್ಲಿನ ಶೇ.50ರ ಮಿತಿಯನ್ನು ವಾಪಾಸ್ ಪಡೆಯಲಾಗಿದೆ ಎಂದು ತಿಳಿಸಿದರು.

ಆದ್ರೇ ಸಿನಿಮಾ ಮಂದಿರಗಳಲ್ಲಿ ಶೇ.50ರ ಮಿತಿಯನ್ನು ಮುಂದುವರೆಸಲಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಸೀಟಿಂಗ್ ಕ್ಯಾಪಸಿಟಿ ಮಾತ್ರ ಭರ್ತಿ ಮಾಡಬೇಕು.  ಹೋಟೆಲ್ ಪಬ್ ಬಾರ್ ರೆಸ್ಟೋರೆಂಟ್  ತೆರೆಯಲು ಅನುಮತಿ ನೀಡಲಾಗಿದೆ. ಮಸೀದಿ ಮಂದಿರ ಚರ್ಚ್ ಗಳಲ್ಲಿ ಸೇವೆ ಆರಂಭಕ್ಕೆ ಅವಕಾಶ, ಶೇ. 50ರಷ್ಟು ಜನ ಸೇರಲು ಅವಕಾಶ. ಜಾತ್ರೆ ಪ್ರತಿಭಟನೆ ರ್ಯಾಲಿ ಸಮಾರಂಭಗಳಿಗೆ ನಿರ್ಬಂಧ ಮುಂದುವರೆಯಲಿದೆ. ಸರ್ಕಾರಿ ಕಚೇರಿಗಳಲ್ಲಿ  ಶೇ.100ರಷ್ಟು ಹಾಜರಾತಿ, ಜಿಮ್ ಈಜುಕೊಳದಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು.

ಹಿಂದಿನ ಲೇಖನವೇತನ ದ್ವಿಗುಣ; ಗ್ರಂಥಾಲಯ ಸಹಾಯಕರಿಂದ ರಾಕೇಶ್ ಸಿಂಗ್ ಗೆ ಅಭಿನಂದನೆ
ಮುಂದಿನ ಲೇಖನಮೂರು ತಿಂಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗೆ ಭರ್ತಿಗೆ ಕ್ರಮ:  ಗೋವಿಂದ ಕಾರಜೋಳ