ಬಂಗಾಳಕೊಲ್ಲಿಯಲ್ಲಿ ಇಂದು ಬೆಳಗಿನ ಜಾವ 5.1 ತೀವ್ರತೆಯ ಭೂಕಂಪ ಸಂಭವಿಸಿದೆ. ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ ಬೆಳಗ್ಗೆ 6.10ಕ್ಕೆ ಭೂಕಂಪ ಸಂಭವಿಸಿದೆ. 91 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.
ಭೂಕಂಪನವು ನಿವಾಸಿಗಳಲ್ಲಿ ಕ್ಷಣಿಕ ಭೀತಿಯನ್ನು ಉಂಟುಮಾಡಿದ್ದರೂ, ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಯುವತಿಯೊಬ್ಬಳು ನಿದ್ರೆಯಿಂದ ಎಚ್ಚರಗೊಂಡು ಹಾಸಿಗೆಯ ಮೇಲೆ ಕುಳಿತಿದ್ದಾಗ ತಲೆ ಸುತ್ತುತ್ತಿರುವಂತೆ ಅನಿಸಿತು, ಮೊದಲಿಗೆ ತನಗೆ ತಲೆ ಸುತ್ತುತ್ತಿರಬಹುದು ಎಂದು ಭಾವಿಸಿದೆ ಆದರೆ ಭೂಕಂಪದ ಶಬ್ದ ಕೇಳಿದಾಗ ಮನೆಯಿಂದ ಹೊರಗೆ ಓಡಿಹೋದೆ ಎಂದು ಹೇಳಿದ್ದಾರೆ.














