ಮನೆ ರಾಷ್ಟ್ರೀಯ ಅಕ್ರಮ ಹಣ ವರ್ಗಾವಣೆ: ಜೂ.13 ರವರೆಗೆ ಸಚಿವ ಸತ್ಯೇಂದ್ರ ಜೈನ್ ಇಡಿ ವಶಕ್ಕೆ

ಅಕ್ರಮ ಹಣ ವರ್ಗಾವಣೆ: ಜೂ.13 ರವರೆಗೆ ಸಚಿವ ಸತ್ಯೇಂದ್ರ ಜೈನ್ ಇಡಿ ವಶಕ್ಕೆ

0

ನವದೆಹಲಿ (New Delhi): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜೂನ್‌ 13 ರವರೆಗೆ ಇಡಿ ವಶಕ್ಕೆ ಒಪ್ಪಿಸಿದೆ.

ಸತ್ಯೇಂದ್ರ ಜೈನ್ ಅವರನ್ನು ಐದು ದಿನಗಳ ಕಾಲ ತನ್ನ ವಶಕ್ಕೆ ಒಪ್ಪಿಸುವಂತೆ ಇಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಅವರು, ಸತ್ಯೇಂದ್ರ ಅವರನ್ನು ಜೂನ್ 13ರವರೆಗೆ ಇಡಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.

ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಜೈನ್ ಅವರು ವಶದಲ್ಲಿದ್ದಾಗ ಇಡಿ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ. ಈ ದಾಖಲೆಗಳ ಬಗ್ಗೆ ಜೈನ್ ಅವರನ್ನು ವಿಚಾರಣೆ ನಡೆಸಬೇಕಿದೆ ಎಂದು ಹೇಳಿದರು.

ಆದರೆ, ಜೈನ್ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಆರೋಪಿಯು ಈಗಾಗಲೇ ಇಡಿ ವಶದಲ್ಲೇ ಇದ್ದಾರೆ. ಹೀಗಾಗಿ ಮತ್ತಷ್ಟು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಇಡಿ ಕೋರಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.