ಮನೆ ಅಪರಾಧ ಚಿಕ್ಕಬಳ್ಳಾಪುರ: ಬಾರ್ ಸಪ್ಲೈಯರ್ ​ ಬರ್ಬರ ಕೊಲೆ

ಚಿಕ್ಕಬಳ್ಳಾಪುರ: ಬಾರ್ ಸಪ್ಲೈಯರ್ ​ ಬರ್ಬರ ಕೊಲೆ

0

ಚಿಕ್ಕಬಳ್ಳಾಪುರ: ಬಾರ್ ಸಪ್ಲೆಯರ್​ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಾಗೇಪಲ್ಲಿ ಪಟ್ಟಣದ ಬಳಿ ಇಂದು ನಡೆದಿದೆ.

Join Our Whatsapp Group

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಚಿತ್ರಾವತಿ ಡ್ಯಾಂ ಬಳಿ ಘಟನೆ ನಡೆದಿದ್ದು, ಕೊಲೆಯಾದ ವ್ಯಕ್ತಿ ಬಾಗೇಪಲ್ಲಿ ಪಟ್ಟಣದ ಶ್ರೀನಿವಾಸ್ (48) ಎಂದು ತಿಳಿದು ಬಂದಿದೆ. ಕೊಲೆಯಾದ ದುರ್ದೈವಿ ಬಾಗೇಪಲ್ಲಿ ಪಟ್ಟಣದ ಪ್ರೀತಿ ಬಾರ್​ನಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ.

ಸ್ಥಳಕ್ಕೆ ಬಾಗೇಪಲ್ಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ಕಾರಣ ಪೊಲೀಸ್​ ತನಿಖೆಯಿಂದ ತಿಳಿದು ಬರಬೇಕಿದೆ.