ಮನೆ ಕಾನೂನು ನಟ ದರ್ಶನ್ ಜಾಮೀನು ಷರತ್ತು ಸಡಿಲಿಸಿದ ಹೈಕೋರ್ಟ್

ನಟ ದರ್ಶನ್ ಜಾಮೀನು ಷರತ್ತು ಸಡಿಲಿಸಿದ ಹೈಕೋರ್ಟ್

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷರತ್ತುಬದ್ಧ ಜಾಮೀನು ಪಡೆದು ಈಗಾಗಲೇ ಜೈಲಿನಿಂದ ಹೊರ ಬಂದಿರುವ ನಟ ದರ್ಶನ್ ಗೆ ಮತ್ತೊಮ್ಮೆ ರಿಲೀಫ್ ಸಿಕ್ಕಿದೆ.

Join Our Whatsapp Group

ನಟ ದರ್ಶನ್ ಜಾಮೀನು ಷರತ್ತು ನಿಯಮವನ್ನ ಹೈಕೋರ್ಟ್ ಸಡಿಲಿಸಿದೆ. ಕೋರ್ಟ್ ಅನುಮತಿಯಿಲ್ಲದೇ  ದೇಶ ಬಿಟ್ಟು ತೆರಳುವಂತಿಲ್ಲ ಎಂಧು ಸೂಚಿಸಿ ಹೈಕೋರ್ಟ್ ನಿಯಮಗಳನ್ನ ಸಡಿಲಿಸಿದೆ. ಈ ಮೊದಲು ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳುವಂತಿರಲಿಲ್ಲ ಎಂಬ ಷರತ್ತನ್ನು ಕೋರ್ಟ್ ಹಾಕಿತ್ತು. ಇದರಿಂದ ದರ್ಶನ್ ಅವರು ಎಲ್ಲೇ ತೆರಳಬೇಕಾದರೂ ಕೋರ್ಟ್​ನ ಅನುಮತಿ ಪಡೆದೇ ಹೋಗಬೇಕಿತ್ತು. ಹೀಗಾಗಿ, ಷರತ್ತು ಸಡಿಲಿಕೆ ಕೋರಿ ಹೈಕೋರ್ಟ್​​ಗೆ ನಟ ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಗೆ ಎಸ್ ಪಿಪಿ ಪ್ರಸನ್ನಕುಮಾರ್ ಆಕ್ಷೇಪಿಸಿದ್ದರು.

‘ಜಾಮೀನು ಪಡೆಯುವಾಗ ಅನಾರೋಗ್ಯದ ಕಾರಣ ನೀಡಿದ್ದರು. ಈಗ ದೇಶದೆಲ್ಲೆಡೆ ಸುತ್ತಾಡಲು ಬಯಸುತ್ತಿದ್ದಾರೆ’ ಎಂದು ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.  ಆದರೆ ಇದೀಗ ಹೈಕೋರ್ಟ್ ದರ್ಶನ್​ ಅವರ ಜಾಮೀನು ಷರತ್ತುಗಳನ್ನು ಸಡಿಲಿಸಿದೆ. ‘ಕೋರ್ಟ್ ಅನುಮತಿಯಿಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ’ ಎಂದು ಕೋರ್ಟ್ ಹೇಳಿದೆ.