ಮನೆ ಅಪರಾಧ ಮಂಡ್ಯ: ಮನೆ ಬೀಗ ಒಡೆದು ಚಿನ್ನಾಭರಣ ಲೂಟಿ

ಮಂಡ್ಯ: ಮನೆ ಬೀಗ ಒಡೆದು ಚಿನ್ನಾಭರಣ ಲೂಟಿ

0


ಮಂಡ್ಯ: ಹಾಡುಹಗಲೇ ಮನೆ ಬೀಗ ಒಡೆದು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸಾದೋಳಲು ಗ್ರಾಮದಲ್ಲಿ ನಡೆದಿದೆ.

Join Our Whatsapp Group


ಗ್ರಾಮದ ಚಿನ್ನಪ್ಪ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, ಮನೆಯ ಬೀರುವಿನ ಬೀಗ ಒಡೆದು ಸುಮಾರು 10 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ.
ಇಂದು ಮಧ್ಯಾಹ್ನ 1.30 ರ ವೇಳೆಯಲ್ಲಿ ಮನೆ ಮಾಲೀಕ ಚಿನ್ನಪ್ಪ ಮದ್ದೂರಿನ ಕೋರ್ಟ್ ಗೆ ತೆರಳಿದ್ದಾಗ ಕಳ್ಳತನ ನಡೆದಿದ್ದು, ಕೆಲಸ ಮುಗಿಸಿ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಮದ್ದೂರು ಠಾಣಾ ಇನ್ಸ್ ಪೆಕ್ಟರ್ ಎಸ್.ಸಂತೋಷ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ‌
ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಸೈಬರ್‌ ಕ್ರೈಮ್‌ ಕಥಾಹಂದರ ಹೊಂದಿರುವ ಚಿತ್ರ “ಡೈಮಂಡ್‌ ಕ್ರಾಸ್‌”
ಮುಂದಿನ ಲೇಖನಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಲಾರಿ