ಬೆಳಗಾವಿ(Belagavi): ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಇಂದು ಬಿರುಸಿನ ಮತದಾನ ನಡೆಯುತ್ತಿದ್ದು ಬಿಜೆಪಿ ಶಾಸಕ ಅನಿಲ್ ಬೆನಕೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಳಗಾವಿ ನಗರದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದ ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಶಾಲೆಯ ಮತಗಟ್ಟೆಗೆ ಭೇಟಿ ನೀಡಿ ಮತಕೇಂದ್ರದೊಳಗೆ ತೆರಳಿದರು.
ಮತ ಕೇಂದ್ರದ ಒಳಗೆ ತೆರಳುವ ವೇಳೆ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಮೊಬೈಲ್ ತಗೆದುಕೊಂಡು ಹೋಗಬಾರದೆಂಬ ನಿಯಮ ಇದೆ. ಆದ್ರೆ ಶಾಸಕ ಅನಿಲ್ ಬೆನಕೆ ಮಾಸ್ಕ್ ಧರಿಸದೇ ಮೊಬೈಲ್‌ನೊಂದಿಗೆ ಮತಗಟ್ಟೆಗೆ ತೆರಳಿ ಮಾತುಕತೆ ನಡೆಸಿದ್ದಾರೆ.
ಅಲ್ಲದೆ ಮಾಸ್ಕ್ ಧರಿಸದೆ ಓಡಾಡಿದ ಹಿನ್ನೆಲೆ ಮತದಾರರು ಶಾಸಕ ಅನಿಲ್ ಬೆನಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರು ಮತಗಟ್ಟೆಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ಮತದಾರರ ಆಕ್ರೋಶಕ್ಕೆ ಕಾರಣವಗಿದೆ.