ಮನೆ ಅಪರಾಧ ಚರಂಡಿ ಗಲಭೆ: ಯುವಕನ‌ ಕೊಲೆ, ಆರು ಜನರ ಸ್ಥೀತಿ ಗಂಭೀರ

ಚರಂಡಿ ಗಲಭೆ: ಯುವಕನ‌ ಕೊಲೆ, ಆರು ಜನರ ಸ್ಥೀತಿ ಗಂಭೀರ

0

ಕಲಬುರಗಿ (Kalburgi):  ಚರಂಡಿ ವಿಷಯದಲ್ಲಿ ಆರಂಭಗೊಂಡ ಕ್ಷುಲಕ ಜಗಳದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಗಲಭೆಯಲ್ಲಿ ಆರು ಜನರು ಗಾಯಗೊಂಡಿರುವ ಘಟನೆ ಚಿತ್ತಾಪುರ ತಾಲೂಕಿನ‌ ಮುಡಬೂಳ ಗ್ರಾಮದಲ್ಲಿ ನಡೆದಿದೆ.

ವಿಶ್ವನಾಥ ಸಂಗಾವಿ (32) ಕೊಲೆಯಾದ ಯುವಕ. ಮುಡಬೂಳ ಗ್ರಾಮದಲ್ಲಿ ಮನೆಯ ಎದುರಿನ ಚರಂಡಿ ವಿಷಯವಾಗಿ ನಿನ್ನೆ ಮಧ್ಯಾಹ್ನ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿತ್ತು‌. ಮತ್ತೆ ಅದೇ ವಿಷಯವಾಗಿ ರಾತ್ರಿಯೂ ಕೂಡಾ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದೆ.

ಪರಿಣಾಮ ಕೆಲವರು ಸಂಗಾವಿ ಕುಟುಂಬದವರ ಮೇಲೆ ಮಾರಕಾಸ್ತ್ರ, ಕಲ್ಲು ಕಟ್ಟಿಗೆಯಿಂದ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಉದ್ರಿಕ್ತ ಗುಂಪು ಸಂಗಾವಿ ಮನೆಯ ಬಾಗಿಲು ಕಲ್ಲುಗಳಿಂದ ಒಡೆದು ಮುರಿದು ಹಾಕಿದ್ದಾರೆ.

ಘಟನೆಯಲ್ಲಿ ವಿಶ್ವನಾಥ ಸಂಗಾವಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಂಗಾವಿ ಮನೆತನದ ಆರು ಜನರು ಗಂಭೀರ ಗಾಯಗೊಂಡಿದ್ದು, ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲಿಸಿದ್ದಾರೆ.

ಘಟನೆ ನಂತರ ದುಷ್ಕರ್ಮಿಗಳು ತೆಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಹಿಂದಿನ ಲೇಖನದಕ್ಷಿಣ ಪದವೀಧರರ ಚುನಾವಣೆ: ಚಾಮರಾಜನಗರದ ಎಲ್ಲಾ ಶಾಸಕರಿಂದ ಮತದಾನ
ಮುಂದಿನ ಲೇಖನಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ಶಾಸಕ ಅನಿಲ್ ಬೆನಕೆ