ಮನೆ ರಾಜ್ಯ ಪಹಲ್ಗಾಮ್‌ನಲ್ಲಿ ನಡೆದ ಅಟ್ಯಾಕ್ ಕ್ಷಮಿಸಲಾರದ ಅಪರಾಧ: ನಟ ಶಿವರಾಜ್ ಕುಮಾರ್ ಖಂಡನೆ

ಪಹಲ್ಗಾಮ್‌ನಲ್ಲಿ ನಡೆದ ಅಟ್ಯಾಕ್ ಕ್ಷಮಿಸಲಾರದ ಅಪರಾಧ: ನಟ ಶಿವರಾಜ್ ಕುಮಾರ್ ಖಂಡನೆ

0

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಕನ್ನಡದ ಹಿರಿಯ ನಟ ಡಾ. ಶಿವರಾಜ್ ಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದು, ಈ ಕೃತ್ಯವನ್ನು “ಕ್ಷಮಿಸಲಾರದ ಅಪರಾಧ” ಎಂದು ಖಂಡಿಸಿದ್ದಾರೆ.

ಈ ಕುರಿತು ಎಕ್ಸ್ (ಟ್ವಿಟ್ಟರ್) ನಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಅವರು,

“ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಪಹಲ್ಗಾಮ್‌ನಲ್ಲಿ ನಡೆದ ಅಟ್ಯಾಕ್ ಕ್ಷಮಿಸಲಾರದ ಅಪರಾಧ. ಭಯೋತ್ಪಾದನೆ ಮಾಡುವ ಯಾರೇ ಆಗಿರಲಿ, ಅವರು ಬದುಕಲು ಅನರ್ಹ. ದಾಳಿಯಲ್ಲಿ ಸಾವನ್ನಪ್ಪಿದವರಿಗೆ ನನ್ನ ಅಂತಿಮ ನಮನ, ಅವರ ಕುಟುಂಬಸ್ಥರಿಗೆ ಆಳವಾದ ಸಾಂತ್ವನ.” ಎಂದು ಬರೆದುಕೊಂಡಿದ್ದಾರೆ.

ಈ ಘಟನೆಗೆ ಪ್ರತಿಕ್ರಿಯಿಸಿರುವ ಹಲವು ಗಣ್ಯರ ಪೈಕಿ, ಶಿವಣ್ಣನ ಶಬ್ದಗಳು ಜನಮನದಲ್ಲಿ ಭದ್ರವಾಗಿ ಪ್ರತಿಧ್ವನಿಸುತ್ತಿದ್ದು, ಸಮಾನತೆ, ಶಾಂತಿ ಮತ್ತು ಮಾನವೀಯತೆಗಾಗಿ ನಿಂತಿರುವ ಕಲಾವಿದ ಎಂಬ ತಮ್ಮ ಇಮೇಜ್‌ಗೆ ಮತ್ತೆ ದೃಢತೆಯನ್ನೂ ನೀಡಿವೆ.