ಮನೆ ಮನರಂಜನೆ ಸಿಸಿಎಸ್‌ಎಸ್‌ ಪ್ರಶಸ್ತಿಯ 7 ವಿಭಾಗಕ್ಕೆ ‘ಗರುಡ ಗಮನ ವೃಷಭ ವಾಹನ’ಚಿತ್ರ ನಾಮನಿರ್ದೇಶನ

ಸಿಸಿಎಸ್‌ಎಸ್‌ ಪ್ರಶಸ್ತಿಯ 7 ವಿಭಾಗಕ್ಕೆ ‘ಗರುಡ ಗಮನ ವೃಷಭ ವಾಹನ’ಚಿತ್ರ ನಾಮನಿರ್ದೇಶನ

0

ಬೆಂಗಳೂರು: ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಕ್ರಿಟಿಕ್ಸ್‌ ಚಾಯ್ಸ್‌ ಶಾರ್ಟ್ಸ್‌ ಆಯಂಡ್‌ ಸಿರೀಸ್‌(ಸಿಸಿಎಸ್‌ಎಸ್‌) ಪ್ರಶಸ್ತಿಯ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ವಿಭಿನ್ನ ಮಾದರಿಯ ಕಥೆ, ರಾಜ್‌ ಬಿ. ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೀ5 ಒಟಿಟಿಯಲ್ಲಿ ಬಿಡುಗಡೆಯಾದ ಮೂರೇ ದಿನದಲ್ಲಿ ಈ ಸಿನಿಮಾ ದಾಖಲೆ ಬರೆದಿತ್ತು.

ಮೊದಲ ಮೂರು ದಿನಗಳಲ್ಲಿ ಒಟ್ಟು 8 ಕೋಟಿ ನಿಮಿಷ ವೀಕ್ಷಣೆಯನ್ನು ಈ ಸಿನಿಮಾ ಕಂಡಿತ್ತು.

ಗರುಡ ಗಮನ ವೃಷಭ ವಾಹನ’ ಸಿನಿಮಾವು ಸಿಸಿಎಸ್‌ಎಸ್‌ ಪ್ರಶಸ್ತಿಯ ಅತ್ಯುತ್ತಮ ಚಲನಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ. ಮಲಯಾಳಂನ ‘ನಾಯಾಟ್ಟು’ ಹಾಗೂ ‘ದಿ ಗ್ರೇಟ್‌ ಇಂಡಿಯನ್‌ ಕಿಚನ್‌’, ತಮಿಳಿನ ‘ಜೈ ಭೀಮ್‌’ ಸೇರಿದಂತೆ ಒಟ್ಟು 10 ಸಿನಿಮಾಗಳು ಈ ವಿಭಾಗಕ್ಕೆ ನಾಮನಿರ್ದೇಶನಗೊಂಡಿವೆ.

ಹಿಂದಿನ ಲೇಖನಮೈಸೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯ ಬಂಧನ, ಇಬ್ಬರ ರಕ್ಷಣೆ
ಮುಂದಿನ ಲೇಖನತುಲಾ ರಾಶಿಯವರ ಗುಣಸ್ವಭಾವ