ಮನೆ ಕಾನೂನು ದೀರ್ಘಕಾಲಿಕ ಸಂಬಂಧ ಮದುವೆಯೆಂದೇ ಪರಿಗಣನೆ:  ಹುಟ್ಟಿದ ಮಗುವಿಗೂ ಆಸ್ತಿ-ಸುಪ್ರೀಂ ತೀರ್ಪು

ದೀರ್ಘಕಾಲಿಕ ಸಂಬಂಧ ಮದುವೆಯೆಂದೇ ಪರಿಗಣನೆ:  ಹುಟ್ಟಿದ ಮಗುವಿಗೂ ಆಸ್ತಿ-ಸುಪ್ರೀಂ ತೀರ್ಪು

0

ನವದೆಹಲಿ(New Delhi): ಪುರುಷ ಮತ್ತು ಮಹಿಳೆ ದೀರ್ಘಕಾಲ ಸಹಬಾಳ್ವೆ ನಡೆಸಿದರೆ ಅವರ ಮಧ್ಯೆ ಇರುವ ಬಂಧವನ್ನು ಮದುವೆ ಎಂದು ಕಾನೂನು ಪರಿಗಣಿಸುತ್ತದೆ ಮತ್ತು ಅದನ್ನು ಅಕ್ರಮ ಸಂಬಂಧ ಎಂದು ಪರಿಗಣಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.

ಅಂತಹ ಪರಿಸ್ಥಿತಿಯಲ್ಲಿ ದಂಪತಿಗಳಿಗೆ ಜನಿಸಿದ ಸಂತಾನಕ್ಕೆ ಪೂರ್ವಜರ ಆಸ್ತಿಯಲ್ಲಿ ಪಾಲು ನಿರಾಕರಿಸಬಾರದು ಎಂದು ಹೇಳುವ ಮೂಲಕ ಕೇರಳ ಹೈಕೋರ್ಟ್‌ ನೀಡಿದ ತೀರ್ಪುನ್ನು ರದ್ದುಗೊಳಿಸಿದೆ.

ಸಂಗಾತಿಗಳು ಬಹು ದಿನಗಳಿಂದ ಸಹಬಾಳ್ವೆ ನಡೆಸುತ್ತಿದ್ದರು. ಅವರಿಗೆ ಗಂಡು ಮಗುವೊಂದು ಜನಸಿದೆ. ಆದರೆ, ದಂಪತಿ ವಿವಾಹವಾಗಿದ್ದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿರಲಿಲ್ಲ. ಈ ಕಾರಣಕ್ಕಾಗಿ ಕೇರಳ ಹೈಕೋರ್ಟ್ 2009ರಲ್ಲಿ ಅವರಿಗೆ ಹುಟ್ಟುವ ‘ಅಕ್ರಮ’ ಮಗುವಿಗೆ ಪೂರ್ವಿಕರ ಆಸ್ತಿಯಲ್ಲಿ ಪಾಲು ನೀಡಬಾರದು ಎಂದು ತೀರ್ಪು ನೀಡಿತ್ತು. ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠವು ಈಗ ಈ ತೀರ್ಪು ರದ್ದುಗೊಳಿಸಿದೆ.

ದಂಪತಿಗಳು ಅಥವಾ ಸಂಗಾತಿಗಳು ದೀರ್ಘಕಾಲ ಒಟ್ಟಿಗೆ ಜೀವನ ನಡೆಸುತ್ತಿದ್ದರೆ ಅವರು ಮದುವೆಯಾಗಿದ್ದಾರೆಂದು ಭಾವಿಸಬೇಕು. ಸಾಕ್ಷ್ಯಾಧಾರ ಕಾನೂನಿನಲ್ಲಿ ಸೆಕ್ಷನ್ 114ರಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಅವರು ದೀರ್ಘಕಾಲ ಒಟ್ಟಿಗೆ ಜೀವನ ನಡೆಸುತ್ತಿದ್ದು, ಮದುವೆಯಾಗಿಲ್ಲ ಎಂದು ಸ್ಪಷ್ಟವಾಗಿ ಸಾಬೀತಾದರೆ ಅವರ ಸಂಬಂಧವನ್ನು ಮದುವೆಯಾಗಿದೆಯೆಂದು ಪರಿಗಣಿಸಬೇಕು. ಇದನ್ನು ಯಾರು ಬೇಕಾದರೂ ಸವಾಲು ಮಾಡಬಹುದು. ಆದರೆ, ತಾವು ಮದುವೆಯಾಗಿಲ್ಲ ಎಂಬುದನ್ನು ಸಾಬೀತುಪಡಿಸುವ ಹೊಣೆಗಾರಿಕೆ ಅವರ ಮೇಲಿರುತ್ತದೆ ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ವಿಚಾರಣಾ ನ್ಯಾಯಾಲಯ ವಿಳಂಬ ಮಾಡಿರುವುದನ್ನು ಸುಪ್ರೀಂಕೋರ್ಟ್ ಗಮನಿಸಿದೆ. ಆಸ್ತಿ ವಿತರಣಾ ಮೊಕದ್ದಮೆಗಳಲ್ಲಿ ಪ್ರಾಥಮಿಕ ತೀರ್ಪು ಹೊರಡಿಸಿದ ತಕ್ಷಣ ಅಂತಿಮ ತೀರ್ಪು ನೀಡುವ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ದೇಶದ ಎಲ್ಲಾ ನ್ಯಾಯಾಲಯಗಳಿಗೆ ಸುಪ್ರೀಂ ನಿರ್ದೇಶನ ನೀಡಿದೆ.