ಮಂಡ್ಯ: ಸರ್ಕಾರವು ಅಲೆಮಾರಿ ಜನಾಂಗಗಳನ್ನು ಮುಖ್ಯವಾಹಿನಿಗೆ ಕರೆತರಲು ಅನೇಕ ಸೌಲಭ್ಯಗಳನ್ನು ಜಾರಿಗೊಳಿಸಿದೆ. ಕನಿ? ದಾಖಲೆಗಳಾದ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಮತ್ತು ಪಡಿತರ ಚೀಟಿಗಳನ್ನು ಇಲಾಖೆಗೆ ಸಲ್ಲಿಸಿ ಸೌಲಭ್ಯಗಳನ್ನು ಪಡೆಯಿರಿ ಎಂದು ಕರ್ನಾಟಕ ಪರಿಶಿ? ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಪಲ್ಲವಿ.ಜಿ ಅವರು ತಿಳಿಸಿದರು.
ಇಂದು ಅವರು ಕೆ. ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಕೃ?ಪುರ ಗ್ರಾಮದಲ್ಲಿನ ಪರಿಶಿ? ಜಾತಿಯ ಸಿಂಧೊಳ್ಳು ಜನಾಂಗ ಕುಟುಂಬಗಳು ವಾಸಿಸುತ್ತಿರುವ ಸ್ಥಳ ವೀಕ್ಷಣೆ ನಡೆಸಿದರು ಮತ್ತು ಜನಾಂಗದ ಹಕ್ಕು ಪತ್ರ ಸಮಸ್ಯೆ ಹಾಗೂ ಕುಂದು ಕೊರತೆಗಳನ್ನು ಆಲಿಸಲಿದರು.
ಅಲೆಮಾರಿ ಜನಾಂಗ ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಮುಖ್ಯ ಮಂತ್ರಿಯವರು ೨೦೧೬ ರಲ್ಲಿ ಜಾರಿಗೆ ತಂದ ಅಭಿವೃದ್ಧಿ ಕೋಶ ೨೦೨೨ ರಲ್ಲಿ ನಿಗಮವಾಗಿ ಪರಿವರ್ತನೆಗೊಂಡಿದೆ ಇದರ ಮೂಲ ಉದ್ದೇಶವೇ ಸರ್ಕಾರದ ಸೌಲಭ್ಯಗಳನ್ನು ಜನಾಂಗದವರಿಗೆ ತಲುಪಿಸುವುದು ಎಂದರು.
ಶಿಕ್ಷಣ ಅಭಿವೃದ್ಧಿಯ ಮುಖ್ಯ ಅಸ್ತ್ರ, ಉಚಿತ ಶಿಕ್ಷಣ, ಬಿಸಿ ಊಟ ಸೇರಿದಂತೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ.ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ಎಂದು ಪೋ?ಕರಿಗೆ ತಿಳುವಳಿಕೆ ಹೇಳಿದರು. ೨೦ ದಿನದೊಳಗಾಗಿ ಕೃ?ಪುರದಲ್ಲಿ ವಸತಿ ಇಲ್ಲದವರ ಅಂಕಿ-ಅಂಶ ಸಂಗ್ರಹಿಸವೇಕು.ಅಗತ್ಯ ದಾಖಲಾತಿಗಳನ್ನು ಪಡೆದುಕೊಂಡು ಜಾತಿ ಪ್ರಮಾಣ ಹೊಂದಿಲ್ಲದವರಿಗೆ ಜಾತಿ ಪ್ರಮಾಣ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿ ಸಾರ್ವಜನಿಕ ಸ್ಮಶಾನ, ಮೂಲ ಸೌಲಭ್ಯಗಳಾದ ಒಳ ಚರಂಡಿ ವ್ಯವಸ್ಥೆ, ರಸ್ತೆ ಸೌಲಭ್ಯ, ನೀರಿನ ಸೌಲಭ್ಯ ಮತ್ತು ವಿದ್ಯುತ್ ಸೌಲಭ್ಯದ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು. ವಸತಿ ಶಿಕ್ಷಣ ಸಂಸ್ಥೆ ಸೌಲಭ್ಯ ಹಾಗೂ ಬಾಲ್ಯ ವಿವಾಹ ಬಗ್ಗೆ ಕುರಿತು ಜನತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪರಿಶಿ? ಜಾತಿ, ಪರಿಶಿ? ಪಂಗಡಗಳಿಗಾಗಿ ಸರ್ಕಾರವು ಒದಗಿಸುತ್ತಿರುವ ಸೌಲಭ್ಯಗಳ ಬಗ್ಗೆ ಪರಿಶಿ? ವರ್ಗಗಳ ಕಲ್ಯಾಣಾಧಿಕಾರಿಗಳು ಜನಾಂಗದವರಿಗೆ ಮಾಹಿತಿ ನೀಡಬೇಕು ಇದು ನಿಮ್ಮ ಆದ್ಯ ಕರ್ತವ್ಯ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಕೆ.ಆರ್ ಪೇಟೆ ತಹಸಿಲ್ದಾರ್ ಅಶೋಕ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿದ್ದಲಿಂಗೇಶ್, ಇನ್ಸ್ಪೆಕ್ಟರ್ ಸುಮಾರಾಣಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ರೈತ ಸಂಘದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.














