ಚನ್ನಪಟ್ಟಣ:ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಸಿಎಂ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು.
ಚನ್ನಪಟ್ಟಣದಲ್ಲಿ ನಡೆದ ನಿಖಿಲ್ ಪರ ಬೃಹತ್ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಯಡಿಯೂರಪ್ಪ ಅವರು, ಬೊಂಬೆಗಳನಾಡಲ್ಲಿ ಕಾಂಗ್ರೆಸ್ ಕೈಗೊಂಬೆ ಸಿ.ಪಿ.ಯೋಗೇಶ್ವರ್ ಅವರು ಗೆಲ್ಲುವುದರಿಂದ ಉಪಯೋಗವಿಲ್ಲ. ಒಂದು ರಸ್ತೆ ಗುಂಡಿ ಮುಚ್ಚುವ ಯೋಗ್ಯತೆಯೂ ಈ ಸರ್ಕಾರಕ್ಕೆ ಇಲ್ಲ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ. ನಾನು ಭಾಗ್ಯಲಕ್ಷ್ಮಿ ಯೋಜನೆ ನಿಲ್ಲಿಸಿದ್ದಾರೆ. ಅನೇಕ ಜನಪರ ಯೋಜನೆಯನ್ನು ನಿಲ್ಲಿಸಿದ್ದಾರೆ. ಅವರಿಗೆ ಹಣ ಕೊಡುವ ಯೋಗ್ಯತೆ ಇಲ್ಲ ಈ ಸರ್ಕಾರ ದಿವಾಳಿ ಆಗಿದೆ. ಮುಂದಿನ ದಿನಗಳು ಒಳ್ಳೆಯದಿದೆ. ನಿಖಿಲ್ ಅವರ ಗೆಲುವಿಗೆ ಮನೆ ಮನೆಗೆ ಹೋಗಿ ಪ್ರಚಾರ ಮಾಡಿ. ಪ್ರಾಮಾಣಿಕ ಕೆಲಸ ಮಾಡಿದರೆ ನಿಖಿಲ್ ಅವರು 25 ಸಾವಿರ ಹೆಚ್ಚಿನ ಮತಗಳಿಂದ ನಿಖಿಲ್ ಗೆಲ್ಲುತ್ತಾರೆ ಎಂದು ಯಡಿಯೂರಪ್ಪ ಕರೆ ನೀಡಿದರು.
ಕಾಲ ಬದಲಾಗಿದೆ, ಜನ ಎಲ್ಲವನ್ನು ಯೋಚನೆ ಮಾಡುತ್ತಾರೆ. ಕೇಂದ್ರದಲ್ಲಿ ದೇವೇಗೌಡರಿಗೆ ಮತ್ತು ಮೋದಿ ಅವರಿಗೆ ಯಾವಾ ರೀತಿ ಇದೇ ಇಲ್ಲರಿಗೂ ಗೊತ್ತು. ಈ ಕ್ಷೇತ್ರವನ್ನು ಗೆಲ್ಲುವುದಾರ ಮೂಲಕ ಸಿದ್ದರಾಮಯ್ಯಗೆ ಪಾಠವನ್ನು ಕಲಿಸಬೇಕು. ನಾಳೆ ಒಂದು ದಿನ ಮನೆ ಮನೆಗೆ ಹೋಗಿ ನಿಖಿಲ್ ಪರ ಮತಯಾಚನೆ ಮಾಡಿ. ನಿಮ್ಮ ಸೇವೆ ಮಾಡುವುದಕ್ಕೆ ಅವಕಾಶ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮನವಿ ಮಾಡಿದರು.