ಮೈಸೂರು, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಶಾಸಕ ಕೆ. ಹರೀಶ್ ಗೌಡ, “ಈ ತೊಂದರೆ ಕಾರುಗಳಿಗೆ ಮುಕ್ತಿ ನೀಡಬೇಕಾದ ಸಮಯ ಬಂದಿದೆ. ಉಗ್ರರ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೂ ನಮ್ಮ ಬೆಂಬಲ ಇರುತ್ತದೆ,” ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ಸಂಪುಟ ಸಭೆ ಕರೆಯಲಾಗಿದೆ ಎಂಬ ವಿಷಯವನ್ನು ಸ್ಪಷ್ಟಪಡಿಸಿದರು. “ಭಯೋತ್ಪಾದಕರಿಗೆ ಸಹಾಯ ನೀಡುವ ಪಾಕಿಸ್ತಾನದ ವಿರುದ್ಧ ಅಗತ್ಯವಿದ್ದರೆ ಯುದ್ಧವನ್ನೂ ಘೋಷಿಸಲಿ. ದೇಶದ ಭದ್ರತೆ ಮತ್ತು ಗೌರವಕ್ಕಾಗಿ ನಾವು ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು,” ಎಂದು ಹೇಳಿದರು.
“ಭಾರತೀಯತೆ ಎಂಬ ಮಾತು ಬಂದಾಗ ನಾವೆಲ್ಲರೂ ಪಕ್ಷ ರಾಜಕಾರಣ ಮೀರಿ ಒಂದಾಗಿ ನಿಂತು ದೇಶವನ್ನು ಬೆಂಬಲಿಸಬೇಕಾದ ಹೊಣೆಗಾರಿಕೆ ನಮಗಿದೆ. ಉಗ್ರರ ಅಟ್ಟಹಾಸವನ್ನು ಮಟ್ಟಹಾಕಬೇಕಾಗಿದೆ. ಪ್ರಧಾನಮಂತ್ರಿ ಮೋದಿ ಈ ಬಗ್ಗೆ ಸೂಕ್ತ ಮತ್ತು ಶಕ್ತಿಯುತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಯೋಗ್ಯತೆ ಹೊಂದಿದ್ದಾರೆ ಎಂಬ ನಂಬಿಕೆ ನಮ್ಮದು,” ಎಂದು ಅವರು ಹೇಳಿದರು.
ಸಿಎಂ ಮೇಲಿನ ಆರೋಪ ‘ಮಾಧ್ಯಮಗಳ ತಿರೂಪು’
ಬೆಳಗಾವಿಯಲ್ಲಿ ನಡೆದ ಸಮ್ಮೇಳನದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದಂತೆ ಬಂದ ವರದಿಗಳ ಕುರಿತು ಪ್ರತಿಕ್ರಿಯಿಸಿದ ಹರೀಶ್ ಗೌಡ, “ಇದು ಸಂಪೂರ್ಣವಾಗಿ ಮಾಧ್ಯಮಗಳ ಸೃಷ್ಟಿ. ಸಿಎಂ ಅವರು ಯಾವುದೇ ತಪ್ಪು ನಡೆದಿಲ್ಲ. ಕಪ್ಪು ಬಾವುಟ ತೋರಿಸಿ ಸಭೆಗೆ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಸೂಕ್ತ ಭದ್ರತೆ ಇಲ್ಲದಿರುವ ಬಗ್ಗೆ ಸಿಎಂ ಅವರು ಪ್ರಶ್ನೆ ಮಾತ್ರ ಮಾಡಿದರು,” ಎಂದು ವಿವರಿಸಿದರು.
“ಅದೇ ಸಂದರ್ಭ, ಅಲ್ಲಿಯವರು ಯಾರೇ ಇದ್ದರೂ ಅದನ್ನೇ ಮಾಡುತ್ತಿದ್ದರು. ಕೆಲವು ಮಾಧ್ಯಮಗಳು ಅದು ಸಹಜ ಪ್ರತಿಕ್ರಿಯೆ ಎಂದು ತೋರಿಸುವ ಬದಲಾಗಿ, ತಪ್ಪಾಗಿ ಪ್ರಚುರಪಡಿಸಿರುವುದು ವಿಷಾದನೀಯ,” ಎಂದು ಅವರು ಮಾಧ್ಯಮಗಳ ವರದಿ ಕ್ರಮವನ್ನು ಪ್ರಶ್ನಿಸಿದರು.
ಈ ಮೂಲಕ ಶಾಸಕ ಹರೀಶ್ ಗೌಡ, ರಾಷ್ಟ್ರ ಭದ್ರತೆ, ಶಾಂತಿ ಕಾಪಾಡುವ ಕುರಿತಾಗಿ ಕೇಂದ್ರ ಸರ್ಕಾರದ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಿರುವಂತೆಯೇ, ರಾಜ್ಯ ರಾಜಕೀಯದಲ್ಲೂ ಸರಿಯಾದ ವಿವರಣೆ ನೀಡುವ ಮೂಲಕ ನಾಯಕತ್ವದ ಬದ್ಧತೆಯನ್ನೂ ಪ್ರದರ್ಶಿಸಿದರು.














