ಮನೆ ರಾಜ್ಯ ಭಾರತ ಯೋಗದ ತೊಟ್ಟಿಲು: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಭಾರತ ಯೋಗದ ತೊಟ್ಟಿಲು: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

0

ಮೈಸೂರು(Mysuru): ನಮ್ಮ ದೇಶವು ಯೋಗ ಮತ್ತು ಅದರ ತೊಟ್ಟಿಲು ಎಂದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್  ಅಭಿಪ್ರಾಯಿಸಿದರು.

ಎಜುಕೇಶನಲ್ ಮಲ್ಟಿ ಮೀಡಿಯಾ ರಿಸರ್ಚ್ ಸೆಂಟರ್ ಹಾಗೂ ಸ್ವಾಮಿ ವಿವೇಕಾನಂದ ಅನುಸಂಧಾನ ಸಂಸ್ಥಾಪನ ಸಂಸ್ಥೆ ಸಹಯೋಗದೊಂದಿಗೆ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಯೋಗದ ಇತಿಹಾಸ ಹಾಗೂ ಅದರ ಬಹುವಿಧದ ಉಪಯುಕ್ತತೆ ಬಗ್ಗೆ ನಡೆದ ವೆಬಿನಾರ್ ಉದ್ಘಾಟಿಸಿ ಮಾತನಾಡಿದರು.

ಎಸ್-ವ್ಯಾಸ, ವಿಶ್ವವಿದ್ಯಾನಿಲಯವು ಯೋಗದ ಪ್ರಚಾರ ನಡೆಸುತ್ತಿರುವ ವಿಶ್ವದ ಮೊದಲ ವಿವಿಯಾಗಿದೆ. ಕಳೆದ ಕೆಲವು ದಶಕಗಳಲ್ಲಿ ಡಾ. ಎಚ್ ಆರ್ ನಾಗೇಂದ್ರ ಗುರೂಜಿ ಯೋಗದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಯೋಗ ಆಧ್ಯಾತ್ಮಿಕ ಆಯಾಮಗಳನ್ನು ಒಳಗೊಂಡಿರುವ ವೈದ್ಯಕೀಯ ವಿಜ್ಞಾನವಾಗಿದೆ‌. ಇಂದು ಈ ಜ್ಞಾನವು ಪ್ರಪಂಚದಾದ್ಯಂತ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಮಾರಣಾಂತಿಕ ಕಾಯಿಲೆಗಳನ್ನು ಎದುರಿಸಲು ಮತ್ತು ಗುಣಪಡಿಸಲು ಮತ್ತು ಮಾನವನ ಆರೋಗ್ಯ ರಕ್ಷಣೆ ಮತ್ತು ಕಲ್ಯಾಣವನ್ನು ಉತ್ತೇಜಿಸುವಲ್ಲಿ ಯೋಗ ಹಾಗೂ ಪ್ರಾಚೀನ ಆಯುರ್ವೇದ ಪದ್ಧತಿ ಸಹಕಾರಿಯಾಗಿದೆ ಎಂದರು.

ಕೋವಿಡ್ ಸಾಂಕ್ರಾಮಿಕ ರೋಗದಿಂದ ನಮ್ಮ ಪ್ರಾಚೀನ ಆರೋಗ್ಯ ಪದ್ಧತಿ ಮತ್ತೆ ಮುನ್ನಲೆಗೆ ಬಂತು. ಆಯುರ್ವೇದಕ್ಕೆ ಜಾಗತಿಕ ಮನ್ನಣೆ ಸಿಕ್ಕಿತು. ಆಧುನಿಕ ಜೀವನಶೈಲಿ ಮತ್ತು ಅದರ ಸ್ವಭಾವದಿಂದ ಉಂಟಾಗುವ ರೋಗದ ವಿರುದ್ಧ ನಾವಿಂದು ಹೋರಾಡಬೇಕಿದೆ. ಔಷಧ- ಅಲೋಪತಿ, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗ, ಇತರ ಸಂಗತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.ಆಯುಷ್ ಅವರ ವಿಶಿಷ್ಟ ವಿಧಾನಗಳನ್ನು ಅನುಸರಿಸಬೇಕಿದೆ ಎಂದರು.

ಇಎಂಆರ್ ಸಿ ನಿರ್ದೇಶಕ ಪ್ರೊ.ಎಚ್.ರಾಜಶೇಖರ ಹಾಗೂ ಎಸ್- ವ್ಯಾಸ ಡೀಮ್ಡ್ ವಿವಿ ರಿಜಿಸ್ಟರ್ ಪ್ರೊ.ಎಂ.ಕೆ.ಶ್ರೀಧರ್, ಪ್ರೊ.ಬಿ.ಆರ್.ರಾಮಕೃಷ್ಣ, ಡಾ.ಎನ್.ಕೆ.ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.