ಮನೆ ರಾಷ್ಟ್ರೀಯ ರಾಜಸ್ಥಾನ: ಗಣಿಯ ಲಿಫ್ಟ್ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ 14 ಮಂದಿಯ ರಕ್ಷಣೆ

ರಾಜಸ್ಥಾನ: ಗಣಿಯ ಲಿಫ್ಟ್ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ 14 ಮಂದಿಯ ರಕ್ಷಣೆ

0

ಜುಂಜುನು( ರಾಜಸ್ಥಾನ): ರಾಜಸ್ಥಾನದ ಜುಂಜುನು ಜಿಲ್ಲೆಯ ಹಿಂದೂಸ್ಥಾನ ಕಾಪರ್ ಲಿಮಿಟೆಡ್‌ ನ ಕೋಲಿಹಾನ್ ಗಣಿಯಲ್ಲಿ ಲಿಫ್ಟ್ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ ಕೋಲ್ಕತಾ ವಿಜಿಲೆನ್ಸ್ ತಂಡದ ಸದಸ್ಯರು ಸೇರಿದಂತೆ 14 ಜನರನ್ನು ರಕ್ಷಿಸಲಾಗಿದೆ.

Join Our Whatsapp Group

ಮಂಗಳವಾರ ರಾತ್ರಿ ಘಟನೆ ನಡೆದಿದ್ದು ಮೊದಲು ಮೂವರನ್ನು ಹೊರಗೆ ಕರೆತರಲಾಯಿತು, ನಂತರ ಉಳಿದ 11 ಜನರನ್ನು ರಕ್ಷಣೆ ಮಾಡಲಾಗಿದೆ.

ರಕ್ಷಿಸಿದ ಬಳಿಕ ಎಲ್ಲರನ್ನೂ ಜೈಪುರದ ಆಸ್ಪತ್ರೆಗೆ ರವಾನಿಸಲಾಗಿದೆ. ರಾತ್ರಿಯ ರಕ್ಷಣ ಕಾರ್ಯಾಚರಣೆಯು ಕೋಲಿಹಾನ್ ಗಣಿಯಲ್ಲಿ 577 ಮೀಟರ್ ಆಳದಲ್ಲಿ ಸಿಲುಕಿಕೊಂಡಿದ್ದ ಸಿಬಂದಿಯನ್ನು ರಕ್ಷಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ವಿಜಿಲೆನ್ಸ್ ತಂಡವು ತಪಾಸಣೆಗಾಗಿ ಕೆಳಕ್ಕೆ ಇಳಿದಾಗ ಈ ಘಟನೆ ಸಂಭವಿಸಿದೆ.

ಹಿಂದಿನ ಲೇಖನಡಿಕ್ಕಿ ಹೊಡೆದ ರಭಸಕ್ಕೆ ಹೊತ್ತಿ ಉರಿದ ಟಿಪ್ಪರ್ ಲಾರಿ- ಬಸ್: ಆರು ಮಂದಿ ಸಜೀವ ದಹನ
ಮುಂದಿನ ಲೇಖನಸಾಲ ತೀರಿಸಲು, ಶೋಕಿ ಜೀವನ ನಡೆಸುವುದಕ್ಕಾಗಿ ಮನೆಯ ಮಾಲಕಿಯನ್ನು ಕೊಂದ ಯುವತಿಯ ಬಂಧನ