ಉಡುಪಿ : ಸಾಮಾಜಿಕ ಜಾಲತಾಣದಲ್ಲಿ “ಸಿದ್ದರಾಮಯ್ಯನನ್ನು ಕೊಂದರೆ ಹಿಂದೂಗಳಿಗೆ ನೆಮ್ಮದಿ ಇರುತ್ತದೆ” ಎಂದು ಕಮೆಂಟ್ ಹಾಕಿದ್ದ ಸದ್ಯ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪೊಲೀಸರು ಕಮೆಂಟ್ ಹಾಕಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ.
ಬಂಧಿತನನ್ನು ಸಂಪತ್ ಸಾಲಿಯಾನ ಎಂದು ಗುರುತಿಸಲಾಗಿದ್ದು, ಆತ ಈಗಾಗಲೇ ಬೆಂಗಳೂರುನಲ್ಲಿ ಹೋಂ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದ. ಸಮಾಜದಲ್ಲಿ ಕಿಡಿಗೇಡಿತನ ಮತ್ತು ಹಿಂಸಾತ್ಮಕ ಮನೋಭಾವನೆಗಳನ್ನು ಉಕ್ಕಿಸುವ ಈ ರೀತಿಯ ಕಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಾ, ಸಂಪತ್ ಕೊಲೆಗೆ ಪ್ರೋತ್ಸಾಹಿಸುವಂತ ಹೇಳಿಕೆಯನ್ನು ತಮ್ಮ ಖಾತೆ ಮೂಲಕ ಪೋಸ್ಟ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಕಳದ ಟೌನ್ ಪೊಲೀಸ್ ಠಾಣೆ ತನಿಖಾ ಅಧಿಕಾರಿಗಳು ತಕ್ಷಣವೇ ಈ ಕಾಮೆಂಟ್ ಬಗ್ಗೆ ಮಾಹಿತಿ ಪಡೆದು, ಸಂಪತ್ನನ್ನು ಗುರುತಿಸಿ, ಇಂದು ಬಂಧನಕ್ಕೊಳಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವ್ಯಕ್ತಿಯ ಮೇಲೆ ಹತ್ಯೆಯ ಬೆದರಿಕೆ ನೀಡುವ ಅಥವಾ ಹಿಂಸೆಗೆ ಪ್ರೋತ್ಸಾಹ ನೀಡುವಂತ ಹೇಳಿಕೆಗಳಿಗೆ ಸರ್ವತ್ರವೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರ ಮತ್ತು ಪೊಲೀಸರು ಇಂತಹ ಕಾನೂನು ಉಲ್ಲಂಘನೆಗಳನ್ನು ಸಹಿಸುವದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಬಂಧನ ಮೂಲಕ ನೀಡಿದ್ದಾರೆ.
ಇತ್ತೀಚಿನ ಬೆಳವಣಿಗೆಗಳಿಂದ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟಿದ್ದು, ಯಾವುದೇ ರೀತಿಯ ಕಿಡಿಗೇಡಿತನ ಅಥವಾ ಭಿನ್ನಮತ ಭಾರಿತ ಪೋಸ್ಟ್ಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ನಿಗದಿತ ಧರ್ಮ, ಸಮುದಾಯ ಅಥವಾ ವ್ಯಕ್ತಿಯ ವಿರುದ್ಧ ಪ್ರಚೋದನಾತ್ಮಕ ಕಮೆಂಟ್ಗಳನ್ನು ಪೋಸ್ಟ್ ಮಾಡುವವರು ಕಾನೂನಿನ ಕೈಗೆ ಸಿಲುಕುವುದು ಖಚಿತ.














