ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಭದ್ರತೆ ಬಗ್ಗೆ ಮತ್ತೆ ಕೇಳಿಬರುವ ಶಂಕೆಗಳಿಗೆ ಕಾರಣವಾದ ಮತ್ತೊಂದು ಅಟ್ಟಹಾಸ ನಡೆಯಿದೆ. ಸಹೋದ್ಯೋಗಿನಿಯ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಆಶಿಶ್ ಮೊನ್ನಪ್ಪ ಎಂದು ಗುರುತಿಸಲಾಗಿದ್ದು, ಮೂಲತಃ ಕೊಡಗು ಜಿಲ್ಲೆಯ ಮಡಿಕೇರಿಗೆ ಸೇರಿದವನಾಗಿದ್ದಾನೆ. ಹೊಸೂರಿನಲ್ಲಿ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸವಿದ್ದು, ಕೆಲಸದ ನಿಮಿತ್ತ ಬೆಂಗಳೂರಿನ ಜಕ್ಕೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ಒಬ್ಬನೇ ಇರುತ್ತಿದ್ದ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಈತ, 2023ರಲ್ಲಿ ಕಂಪನಿಗೆ ಸೇರಿದ್ದ. ಆದರೆ ಜನವರಿ 2024ರಲ್ಲಿ ಕೆಲಸದಿಂದ ನಿರ್ಗಮಿಸಿದ್ದ.
ಆಶಿಶ್ ತನ್ನ ಹಳೆ ಕಂಪನಿಯ ಮಹಿಳಾ ಸಹೋದ್ಯೋಗಿಯಿಂದ ಲ್ಯಾಪ್‌ಟಾಪ್ ಅನ್ನು ರೆಸ್ಯೂಮ್ ತಯಾರಿಸಿಕೊಳ್ಳಲು ಬಳಸಿಕೊಂಡಿದ್ದ. ಲ್ಯಾಪ್‌ಟಾಪ್ ತೆಗೆದುಕೊಂಡ ಕೆಲ ದಿನಗಳ ನಂತರ ಅದು ಪುನಃ ಹಿಂದಿರುಗಿಸಿದಾಗ, ಸ್ನೇಹಿತೆ ಲ್ಯಾಪ್‌ಟಾಪ್ ಪರಿಶೀಲಿಸಿದಾಗ ಅಶ್ಲೀಲವಾಗಿ ಮಾರ್ಫ್ ಮಾಡಲಾದ ಫೋಟೋಗಳ ಫೋಲ್ಡರ್ ಒಂದನ್ನು ನೋಡಿದಳು. ಆ ಫೋಲ್ಡರ್‌ನಲ್ಲಿ ಕಂಪನಿಯ ಇನ್ನಿತರ ಮಹಿಳಾ ಸಹೋದ್ಯೋಗಿಗಳ ಫೋಟೋಗಳನ್ನು ಅಸಭ್ಯ ರೀತಿಯಲ್ಲಿ ಎಡಿಟ್ ಮಾಡಿ ಸಂಗ್ರಹಿಸಿದ್ದನ್ನು ಕಂಡು ಬೆಚ್ಚಿಬಿದ್ದಳು.
ಈ ಬಗ್ಗೆ ಆರೋಪಿಗೆ ಸಂದೇಶ ಕಳುಹಿಸಿ ಉತ್ತರ ಕೇಳಿದಾಗ, ಆತ ಆಘಾತದಿಂದ ತಕ್ಷಣ ಪ್ರತಿಕ್ರಿಯೆ ನೀಡಿ ಸ್ಥಳದಲ್ಲಿಯೇ ತನ್ನ ಮೊಬೈಲ್ ಬಿಟ್ಟು ಪರಾರಿಯಾಗಿದ್ದ. ಸ್ನೇಹಿತೆ ಕೂಡಲೇ ಸಂಬಂಧಿತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಬೆಂಗಳೂರಿನ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ಮಡಿಕೇರಿಯಲ್ಲಿ ಆಶಿಶ್ ಮೊನ್ನಪ್ಪನನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ.














