ಮನೆ ಆರೋಗ್ಯ 7 ತಿಂಗಳಲ್ಲೇ ಅತಿ ಹೆಚ್ಚು ಪ್ರಕರಣ: 7,830 ಕೋವಿಡ್ ಪ್ರಕರಣ ಪತ್ತೆ

7 ತಿಂಗಳಲ್ಲೇ ಅತಿ ಹೆಚ್ಚು ಪ್ರಕರಣ: 7,830 ಕೋವಿಡ್ ಪ್ರಕರಣ ಪತ್ತೆ

0

ನವದೆಹಲಿ: ದೇಶದಾದ್ಯಂತ ಬುಧವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆಗಳಲ್ಲಿ ಹೊಸದಾಗಿ 7,830 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಕಳೆದ ಏಳು ತಿಂಗಳಲ್ಲೇ ಗರಿಷ್ಠ ಕೊರೊನಾ ಸೋಂಕು ಪ್ರಕರಣ ದಾಖಲಾಗಿದೆ.

Join Our Whatsapp Group

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 16 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಕಳೆದ ವರ್ಷ ಸೆಪ್ಟೆಂಬರ್ 1ರಂದು ದೇಶದಲ್ಲಿ 7,946 ಪ್ರಕರಣ ದಾಖಲಾಗಿತ್ತು.ಸಕ್ರಿಯ ಪ್ರಕರಣಗಳ ಸಂಖ್ಯೆ 40,215ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೆ 4.47 ಕೋಟಿ (4,47,76,002) ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು 5,31,016 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಈವರೆಗೆ ಒಟ್ಟು 4,42,04,771 ಮಂದಿ ಗುಣಮುಖರಾಗಿದ್ದಾರೆ.ಒಟ್ಟು ಸೋಂಕಿತರ ಪೈಕಿ ಶೇ 0.09 ಸಕ್ರಿಯ ಪ್ರಕರಣಗಳಿವೆ. ಹಾಗೆಯೇ ರಾಷ್ಟ್ರೀಯ ಕೋವಿಡ್ ಚೇತರಿಕೆ ಪ್ರಮಾಣ ಶೇ 98.72 ಆಗಿದೆ.ದೇಶದಲ್ಲಿ ಈವರೆಗೆ 220.66 ಕೋಟಿ ಕೋವಿಡ್ ಲಸಿಕೆ ಡೋಸ್ ವಿತರಿಸಲಾಗಿದೆ.

ಹಿಂದಿನ ಲೇಖನಸದುದ್ದೇಶದಿಂದ ರೂಪುಗೊಂಡ ಕೊಲಿಜಿಯಂ ವ್ಯವಸ್ಥೆಯನ್ನು ಆಡಳಿತಾರೂಢರು ಭ್ರಷ್ಟಗೊಳಿಸುತ್ತಿದ್ದಾರೆ: ನ್ಯಾ. ಚಲಮೇಶ್ವರ್
ಮುಂದಿನ ಲೇಖನಬಿಜೆಪಿಗೆ ಲಕ್ಷ್ಮಣ ಸವದಿ ರಾಜೀನಾಮೆ