ಮನೆ ರಾಜ್ಯ ಸಿಇಟಿ ಅರ್ಜಿ ಈಗ ನಿಮ್ಮ ಕೈಯಲ್ಲೇ: ಮೊಬೈಲ್ ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ

ಸಿಇಟಿ ಅರ್ಜಿ ಈಗ ನಿಮ್ಮ ಕೈಯಲ್ಲೇ: ಮೊಬೈಲ್ ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ

0

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಹೊಸ ಮೊಬೈಲ್ ಆ್ಯಪ್ ಮತ್ತು ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ. ಆ ಮೂಲಕ ಸಿಇಟಿ ಆಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುಡ್ ನ್ಯೂಸ್​ ನೀಡಿದೆ. ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಸುಧಾಕರ್​​ರಿಂದ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ.

ಇನ್ಮುಂದೆ ಸಿಇಟಿ ಅರ್ಜಿ ಸಲ್ಲಿಸಲು ಸೈಬರ್​​ ಸೆಂಟರ್​ಗೆ ಹೋಗಬೇಕಾಗಿಲ್ಲ. ಮೊಬೈಲ್ ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸೈಬರ್ ಸೆಂಟರ್​​ನಲ್ಲಿ ತಪ್ಪಾಗಿ ಅರ್ಜಿ ಸಲ್ಲಿಸಿ ಅಭ್ಯರ್ಥಿಗಳು ಪರದಾಡುತ್ತಿದ್ದರು. ಇದೇ ಕಾರಣದಿಂದ ಅರ್ಹರಿಗೆ ಸಿಇಟಿ ಸೀಟ್​ ಮಿಸ್ ಆಗುತ್ತಿತ್ತು. ಹಾಗಾಗಿ ಕೆಇಎ ಮೊಬೈಲ್ ಆ್ಯಪ್, ಚಾಟ್ ಬಾಟ್ ಮತ್ತು ಪೊರ್ಟಲ್​​ ಅನ್ನು ಬಿಡುಗಡೆ ಮಾಡಿದೆ.

ಹೊಸ ಮೊಬೈಲ್​ ಆ್ಯಪ್​ನಿಂದ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ.​​ ಸಿಇಟಿ ಪರೀಕ್ಷೆಯ ಸಮಸ್ಯೆಗಳು, ಕಾಲೇಜುಗಳ ಸಮಗ್ರ ಮಾಹಿತಿ, ಆಯ್ಕೆ ಮಾಡುವ ಇಂಜಿನೀಯರಿಂಗ ಕಾಲೇಜು ಶುಲ್ಕ ಎಷ್ಟು? ಆ ಕಾಲೇಜಿನಲ್ಲಿ ಹಾಸ್ಟೇಲ್ ಶುಲ್ಕ ಏನಿದೆ? ಇತರೇ ಸೌಲಭ್ಯಗಳು ಏನಿದೆ ಎಂದು ಹಲವಾರು ಪ್ರಶ್ನೆಗಳಿಗೆ ಆ್ಯಪ್ ನಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ.

ಈ ಮೊಬೈಲ್ ಆ್ಯಪ್​​​​ ಮತ್ತು ಪೋರ್ಟಲ್​ನಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ. ಪಠ್ಯಕ್ರಮ, ಕಾಲೇಜು ಮತ್ತು ಸೌಲಭ್ಯಗಳ ಮಾಹಿತಿಯೂ ಸಿಗಲಿದೆ. ವಿದ್ಯಾರ್ಥಿಗಳು ಪೋರ್ಟಲ್​ನಲ್ಲಿ ಒಮ್ಮೆ ಅರ್ಜಿ ತುಂಬಿದರೆ ಸಾಕು, ಪದೇ ಪದೆ ಅರ್ಜಿ ತುಂಬುವ ಅವಶ್ಯಕತೆ ಬರುವುದಿಲ್ಲ. ಆ್ಯಪ್​​ ಡೌನ್​ಲೋಡ್​ ಮಾಡಿಕೊಂಡು ಯುಜಿ-ಸಿಇಟಿ, ಪಿಜಿ-ಸಿಇಟಿ, ಡಿಸಿಇಟಿ ಅರ್ಜಿ ಭರ್ತಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.