ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 10ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಿದ್ದು, ದೇಶದಾದ್ಯಂತ ವಿದ್ಯಾರ್ಥಿಗಳಲ್ಲಿ ಸಂತೋಷದ ಹೊನಲು ಚೆಲ್ಲಿದೆ. ಈ ಫಲಿತಾಂಶದಲ್ಲಿ ಬೆಂಗಳೂರು ನಗರವು ಉತ್ತಮ ಸಾಧನೆ ನಡೆಸಿ ದೇಶದ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ ಎಂಬುದು ಹೆಮ್ಮೆನಿಸುವ ವಿಚಾರ.
ಈ ವರ್ಷ ಸಿಬಿಎಸ್ಇ 10ನೇ ತರಗತಿಯ ಫಲಿತಾಂಶದಲ್ಲಿ ಒಟ್ಟು 93.60% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದು ಕಳೆದ ವರ್ಷದ 93.12% ಗೆ ಹೋಲಿಸಿದರೆ 0.06% ಅಧಿಕವಾಗಿದೆ. ವಿಶೇಷವಾಗಿ ಹುಡುಗಿಯರು ಹುಡುಗರಿಗಿಂತ 2.37% ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ವರ್ಷ ಹುಡುಗಿಯರ ಉತ್ತೀರ್ಣ ಪ್ರಮಾಣ 95% ಆಗಿದ್ದು, ಶಿಕ್ಷಣದಲ್ಲಿ ಲಿಂಗ ಸಮಾನತೆಯತ್ತ ಮುನ್ನಡೆಯದಿರುವ ಇನ್ನೊಂದು ಉದಾಹರಣೆಯಾಗಿದೆ.
ಸಿಬಿಎಸ್ಇ 10ನೇ ಫಲಿತಾಂಶ ಹೇಗೆ ಪರಿಶೀಲಿಸಬೇಕು?
- ಅಧಿಕೃತ ವೆಬ್ಸೈಟ್: cbse.gov.in
- ‘Results’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- “Class 10 Results” ಲಿಂಕ್ ಆಯ್ಕೆಮಾಡಿ.
- ಲಾಗಿನ್ ಪುಟದಲ್ಲಿ ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ.
- Submit ಕ್ಲಿಕ್ ಮಾಡಿದ ಬಳಿಕ ನಿಮ್ಮ ಫಲಿತಾಂಶ ಪೈದೆಯಲ್ಲೇ ಕಾಣಿಸುತ್ತದೆ.
- ಡೌನ್ಲೋಡ್ ಮಾಡಿ ಭವಿಷ್ಯಕ್ಕಾಗಿ ಉಳಿಸಿ.
ಡಿಜಿಲಾಕರ್ನಲ್ಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ ಹೇಗೆ ಪಡೆಯುವುದು?
- DigiLocker App ಡೌನ್ಲೋಡ್ ಮಾಡಿ ಅಥವಾ digilocker.gov.in ಗೆ ಭೇಟಿ ನೀಡಿ.
- ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ.
- ತರಗತಿ ಆಯ್ಕೆಮಾಡಿ (Class 10).
- ಶಾಲೆಯ ಹೆಸರು, ರೋಲ್ ಸಂಖ್ಯೆ ಮತ್ತು ಆರು-ಅಂಕಿಯ ಕೋಡ್ ನಮೂದಿಸಿ.
- OTP ಮೂಲಕ ಖಾತೆ ಸಕ್ರಿಯಗೊಳಿಸಿ.
- “Go to DigiLocker account” ಕ್ಲಿಕ್ ಮಾಡಿ ಮತ್ತು ನಿಮ್ಮ ದಾಖಲೆಗಳನ್ನು ಡೌನ್ಲೋಡ್ ಮಾಡಿ.
ವಿಶೇಷ ಸೂಚನೆ: ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಈಗ ಡಿಜಿಟಲ್ ದಾಖಲೆಗಳ ಪೂರೈಕೆಗೆ ಡಿಜಿಲಾಕರ್ ವ್ಯವಸ್ಥೆ ಒದಗಿಸಲಾಗಿದೆ. ಈ ಮೂಲಕ ಅಂಕಪಟ್ಟಿ, ಉತ್ತೀರ್ಣ ಪ್ರಮಾಣಪತ್ರ, ವರ್ಗಾವಣೆ ಪ್ರಮಾಣಪತ್ರಗಳನ್ನು ಆನ್ಲೈನ್ನಲ್ಲಿ ಸುಲಭವಾಗಿ ಪಡೆಯಬಹುದು.














