ಮನೆ ಸುದ್ದಿ ಜಾಲ ದಾವಣಗೆರೆ: ಹೆಬ್ಬಾಳು ಟೋಲ್ ಗೇಟ್ ಬಳಿ ಕಾನ್‌ಸ್ಟೇಬಲ್ ಸಾವಿಗೆ ಸಂಬಂಧಿಸಿದಂತೆ ಎಸ್‌ಪಿ ಸ್ಪಷ್ಟನೆ!

ದಾವಣಗೆರೆ: ಹೆಬ್ಬಾಳು ಟೋಲ್ ಗೇಟ್ ಬಳಿ ಕಾನ್‌ಸ್ಟೇಬಲ್ ಸಾವಿಗೆ ಸಂಬಂಧಿಸಿದಂತೆ ಎಸ್‌ಪಿ ಸ್ಪಷ್ಟನೆ!

0

ದಾವಣಗೆರೆ : ಹೆಬ್ಬಾಳು ಟೋಲ್ ಗೇಟ್ ಬಳಿ ಎರಡು ದಿನಗಳ ಹಿಂದೆ ಸಂಭವಿಸಿದ್ದ ದಾರುಣ ಘಟನೆಯಾದ ಕಾನ್‌ಸ್ಟೇಬಲ್ ರಾಮಪ್ಪ ಪೂಜಾರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಉಮಾ ಪ್ರಶಾಂತ್ ಸ್ಪಷ್ಟನೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದ ಕೆಲವು ತಪ್ಪಾದ ಮಾಹಿತಿಗಳ ಬಗ್ಗೆ ಅವರು ಕಿಡಿಕಾರಿದ್ದಾರೆ.

ರಾಮಪ್ಪ ಪೂಜಾರ್ ಎಂಬ ಕಾನ್‌ಸ್ಟೇಬಲ್‌ ಮೇಲೆ ಒಂದು ಕ್ಯಾಂಟರ್ ವಾಹನ ಹರಿದಿತ್ತು. ವಾಹನ ಎಡಬದಿಯ ಬದಲಿಗೆ ಬಲಬದಿಗೆ ಹೋಗಿದ್ದು, ಇದರಿಂದ ದುರಂತ ಸಂಭವಿಸಿದೆ ಎಂದು ಎಸ್‌ಪಿ ಹೇಳಿದರು.

ಟೋಲ್ ಗೇಟ್ ಬಳಿ ಸಿಸಿಟಿವಿ ಇಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಿದ್ದು, ಅದನ್ನು ಎಸ್‌ಪಿ ಖಂಡಿಸಿದ್ದಾರೆ. ಅವರು ಸ್ಪಷ್ಟಪಡಿಸಿದಂತೆ, 2022ರಿಂದ ಲೇನ್ ಡಿಸಿಪ್ಲಿನ್ ಪ್ರಾಜೆಕ್ಟ್ ಅಡಿಯಲ್ಲಿ 12 ಸಿಸಿಟಿವಿ ಕೆಮೆರಾಗಳನ್ನು ಅಳವಡಿಸಲಾಗಿದೆ. ಲೇನ್ ಉಲ್ಲಂಘನೆಯಂತಹ ಯಾವುದೇ ಘಟನೆಗಳು ಪಿಡಿಎಂಎಸ್ ಡಿವೈಸ್​ ಉಪಕರಣಗಳಲ್ಲಿ ದಾಖಲಾಗಿ ಇರುತ್ತವೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದ ತನಿಖೆ ಮುಂದುವರಿದಿದ್ದು, ವಾಹನ ಚಾಲಕನ ತಪ್ಪು ನಿರ್ವಹಣೆಯೇ ದುರಂತಕ್ಕೆ ಕಾರಣವಾಗಿದೆ ಎಂಬ ಪ್ರಾಥಮಿಕ ವರದಿಯಾಗಿದೆ. ಎಸ್‌ಪಿ ಉಮಾ ಪ್ರಶಾಂತ್ ಅವರು ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡದಂತೆ ಮಾಹಿತಿ ಸ್ಪಷ್ಟಪಡಿಸಿದ್ದು, ಸಂಚಾರ ನಿಯಮ ಪಾಲನೆ ಹಾಗೂ ಲೇನ್ ಶಿಸ್ತು ಕಡ್ಡಾಯವಾಗಿ ಪಾಲನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.