ಮೈಸೂರು(Mysuru): ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೈಸೂರು ಜಿಲ್ಲಾಧ್ಯಕ್ಷರಾಗಿ ಬಿ.ನಿಂಗರಾಜು ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಘಟಕವನ್ನು ವಿಸ್ತರಿಸುವ ಸಲುವಾಗಿ ಆರ್ ಎನ್ ಐ ಯಲ್ಲಿ ನೋಂದಣಿಯಾಗಿರುವ ವಾರಪತ್ರಿಕೆ, ಮಾಸಪತ್ರಿಕೆ, ಪಾಕ್ಷಿಕ ಪತ್ರಿಕೆ ಹಾಗೂ ದಿನಪತ್ರಿಕೆಯ ಪತ್ರಕರ್ತರಿಗೆ ಸದರಿ ಸಂಘದ ಗುರುತಿನ ಚೀಟಿಯನ್ನು ನೀಡಲು ಮತ್ತು ಕುಂದುಕೊರತೆಗಳಿಗೆ ಸ್ಪಂದಿಸುವಂತೆ ಸಂಘದ ರಾಜ್ಯಾಧ್ಯಕ್ಷ ಜಿ.ವೆಂಕಟೇಶ ಬೋವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಜಿಲ್ಲಾ ಘಟಕಕ್ಕೆ ಬೇಕಾಗಿರುವ ಸೂಕ್ತ ಪದಾಧಿಕಾರಿಗಳನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ನೀಡಲಾಗಿದೆ.
ಸಂಘಕ್ಕೆ ಸೇರಬಯಸುವವರು ಡಾ.ವಿನಯ್ ಕುಮಾರ್ ಮೊ.ನಂ.6361528300ನ್ನು ಸಂಪರ್ಕಿಸಲು ಕೋರಲಾಗಿದೆ.