ಮನೆ ಅಪರಾಧ ಗದಗ: ಹದಿಹರೆಯದ ಯುವಕ ಮೂರು ಮಕ್ಕಳ ತಾಯಿ ಜೊತೆ ಲವ್ವಿಡವ್ವಿ ಕೊಲೆಯಲ್ಲಿ ಅಂತ್ಯ.!

ಗದಗ: ಹದಿಹರೆಯದ ಯುವಕ ಮೂರು ಮಕ್ಕಳ ತಾಯಿ ಜೊತೆ ಲವ್ವಿಡವ್ವಿ ಕೊಲೆಯಲ್ಲಿ ಅಂತ್ಯ.!

0

ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದ ಬಳಿ ಕಳೆದ ಏಪ್ರಿಲ್ 23ರಂದು ಪತ್ತೆಯಾದ ಅನಾಮಧೇಯ ಮಹಿಳೆಯ ಶವ ಪ್ರಕರಣಕ್ಕೆ ಭೀಕರ ಟ್ವಿಸ್ಟ್ ಸಿಕ್ಕಿದ್ದು, ಇದು ಸಹಜ ಸಾವು ಅಲ್ಲದೆ ಪ್ರೇಮ ಸಂಬಂಧ, ಹಣದ ಬೇಡಿಕೆ ಮತ್ತು ಕೊಲೆಯಲ್ಲಿ ಅಂತ್ಯಗೊಂಡ ‘ಲವ್ವಿಡವ್ವಿ’ ಕಥೆಯಾಗಿ ಹೊರಬಂದಿದೆ.

ಪೊಲೀಸರು ಪ್ರಕರಣವನ್ನು ತನಿಖೆ ನಡೆಸಿದಾಗ, ಮೃತ ಮಹಿಳೆಯನ್ನು ನೇಲೊಗಲ್ ಗ್ರಾಮದ ಲಕ್ಷ್ಮೀ ಇಂಗಳಗಿ (35) ಎಂದು ಗುರುತಿಸಲಾಗಿದೆ. ಲಕ್ಷ್ಮಿಗೆ ಮೂವರು ಮಕ್ಕಳು ಇದ್ದರೂ ಗಂಡನಿಂದ ಬೇರ್ಪಟ್ಟಿದ್ದರು ಮತ್ತು ಬದುಕನ್ನು ಸಾಗಿಸಲು ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.

ಮಂಗಳೂರಿನಲ್ಲಿ ಕೆಲಸ ಮಾಡುವಾಗ, ಹಾವೇರಿ ಜಿಲ್ಲೆಯ ಯುವಕ ಸುನೀಲ್ ಜೊತೆ ಲಕ್ಷ್ಮಿಗೆ ಪರಿಚಯವಾಗಿದ್ದು, ಅವರು ಪ್ರೇಮ ಸಂಬಂಧದಲ್ಲಿದ್ದರು. ಈ ಸಂಬಂಧವು ಅನೈತಿಕ ಹಂತಕ್ಕೆ ಹೋಗಿದ್ದರೂ, ಕೆಲ ಕಾಲದ ಬಳಿಕ ಸುನೀಲನ ಮನೆಯವರು ಮದುವೆಗೆ ತಯಾರಿ ನಡೆಸುತ್ತಿದ್ದರು. ಇದರ ಬೆನ್ನಲ್ಲೇ ಲಕ್ಷ್ಮೀ, ತಮ್ಮ ಸಂಬಂಧವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ₹5 ಲಕ್ಷ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು.

ಲಕ್ಷ್ಮಿಯ ಬ್ಲ್ಯಾಕ್‌ಮೇಲ್ ನಿಂದ ಬೇಸತ್ತ ಸುನೀಲ್ ತನ್ನ ಗೆಳೆಯರು – ಸಿದ್ದಪ್ಪ, ನಟರಾಜ್ ಮತ್ತು ರಮೇಶ್ ಅವರೊಂದಿಗೆ ಕೊಲೆ ಸಂಚು ರೂಪಿಸುತ್ತಾನೆ. ಏಪ್ರಿಲ್ 22ರಂದು ಕಾರಿನಲ್ಲಿ ಲಕ್ಷ್ಮಿಯನ್ನು ಮಂಗಳೂರಿಗೆ ಕರೆದುಕೊಂಡು ಹೋಗುವ ನೆಪದಲ್ಲಿ, ಕೇಬಲ್ ವೈರ್ ಬಳಸಿ ಕತ್ತು ಬಿಗಿದು ಕೊಲೆ ಮಾಡಲಾಗುತ್ತದೆ. ಬಳಿಕ ಮೃತದೇಹವನ್ನು ಸೂರಣಗಿ ಬಳಿ ಎಸೆದು ಪಲಾಯನ ಮಾಡಲಾಗುತ್ತದೆ.

ಮೃತಳ ಸಹೋದರಿ ಸಾವಿನಲ್ಲಿ ಅನುಮಾನ ಇದೆ ಎಂದು ದೂರು ನೀಡಿದ್ದಾಳೆ. ಈ ದೂರಿನ ಮೇರೆಗೆ ತನಿಕೆ ಕೈಗೊಂಡ ಪೊಲೀಸರಿಗೆ ಅದೊಂದು ಫೋನ್​​ನ ಒಂದು ಸಣ್ಣ ಸುಳಿವು ಸಿಕ್ಕಿತ್ತು. ಅದೇ ಸುಳಿವಿನ ಮೇರೆ ತನಿಖೆ ನಡೆಸಿದ ಪೊಲಿಸರಿಗ ಹಂತಕನ ಇತಿಹಾಸವೇ ಸಿಕ್ಕಿದೆ.

ಒಟ್ಟಿನಲ್ಲಿ ಮೂರು ಮಕ್ಕಳ ತಾಯಿ ಮದುವೆ ಆಗದ ಯವಕನನ್ನು ಹಣಕ್ಕಾಗಿ ಬ್ಲ್ಯಾಕ್​ ಮೇಲ್​ ಮಾಡಲು‌ ಹೋಗಿ ಹೆಣವಾಗಿದ್ದಾಳೆ. ಇನ್ನು ಮದುವೆ ಮಾಡಿಕೊಂಡು ಸುಂದರ ಜೀವನ ನಡೆಸಬೇಕಾದ ಯುವಕ, ಮಹಿಳೆ ಹಿಂದೆ ಬಿದ್ದು ಇದೀಗ ಜೈಲು ಸೇರಿದ್ದಾನೆ. ಹಾಗೇ ಸ್ನೇಹಿತನಿಗೆ ಸಹಾಯ ಮಾಡಲೂ ಹೋದ ಮೂವರು ಗೆಳೆಯಸರು ಸಹ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.