ಮನೆ ರಾಷ್ಟ್ರೀಯ ಬಸ್-ಪಿಕಪ್ ಡಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ

ಬಸ್-ಪಿಕಪ್ ಡಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ

0

ಬಾರ್ಮರ್‌(ರಾಜಸ್ಥಾನ): ಮಿನಿ ಬಸ್ ಮತ್ತು ಪಿಕಪ್ ವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 17 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರ್ಮರ್ ಪೊಲೀಸ್ ಠಾಣೆಯ ಸಬ್ ಇನ್ಸ್‌ ಪೆಕ್ಟರ್ ಮಾತನಾಡಿ , ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಣಪತ್ ಸಿಂಗ್ ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಿದರು.

ಹಿಂದಿನ ಲೇಖನನಾಗರಹೊಳೆ ರಾಷ್ಟ್ರೀಯ ಉದ್ಯಾನವನ: ಬೇಟೆಗಾಗಿ ಮರಿಯೊಂದಿಗೆ ಕಾಯುತ್ತಿರುವ ತಾಯಿ ಹುಲಿ
ಮುಂದಿನ ಲೇಖನಪ್ರತಿದಿನ ನಾಲ್ಕು ಸ್ಪೂನ್ ದಾಳಿಂಬೆ ಸೇವಿಸಿ, ತೂಕ ಇಳಿಸಿ