ಮನೆ ಸ್ಥಳೀಯ ಮಗಳಿಗೆ ಆಸ್ತಿ ಕೊಡಲೇಬೇಡಿ, ಸಾಯುವ ಹಿಂದಿನ ದಿನ ಕಿರಿಮಗಳ ಕೈಯಲ್ಲಿ ಡೆತ್‍ನೋಟ್ ಬರೆಸಿದ್ದ ತಂದೆ!

ಮಗಳಿಗೆ ಆಸ್ತಿ ಕೊಡಲೇಬೇಡಿ, ಸಾಯುವ ಹಿಂದಿನ ದಿನ ಕಿರಿಮಗಳ ಕೈಯಲ್ಲಿ ಡೆತ್‍ನೋಟ್ ಬರೆಸಿದ್ದ ತಂದೆ!

0

ಮೈಸೂರು: ಮೈಸೂರಿನ ಹೆಚ್‌ಡಿ ಕೋಟೆ ತಾಲ್ಲೂಕಿನಲ್ಲಿ ನಡೆದ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣವು ಇದೀಗ ಭಾರೀ ಸ್ಫೋಟಕ ಮಾಹಿತಿಗಳಿಂದ ಮತ್ತಷ್ಟು ಗಂಭೀರ ರೂಪ ಪಡೆದುಕೊಂಡಿದೆ. ಮಗಳ ಪ್ರೇಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ತಂದೆ, ತಾಯಿ ಮತ್ತು ಕಿರಿಯ ಮಗಳು ಜಲ ಸಮಾಧಿ ಹೊಂದಿದ್ದು, “ಡೆತ್ ನೋಟ್” ಬರೆಸಿದ್ದು, ಕೆಲವು ವಿಚಾರಗಳನ್ನು ಅದರಲ್ಲಿ ದಾಖಲಿಸಿದ್ದಾರೆ.

ಆತ್ಮಹತ್ಯೆಗೆ ಮುನ್ನ ಮಹದೇವಸ್ವಾಮಿ ಬರೆದ ಡೆತ್ ನೋಟ್ ನಾಲ್ಕು ಪುಟಗಳನ್ನು ಒಳಗೊಂಡಿದ್ದು, ತನ್ನ ಹಿರಿಯ ಮಗಳು ಅರ್ಪಿತಾ ಪ್ರೀತಿಸುತ್ತಿದ್ದ ಹುಡುಗನ ನಡವಳಿಕೆ ಸರಿಯಿಲ್ಲ, ಅವನು ಈಗಾಗಲೇ ಲವ್ ಬ್ರೇಕಪ್ ಅನುಭವಿಸಿದ್ದ, ಈ ವಿಷಯವನ್ನು ಎಷ್ಟೇ ಹೇಳಿದರೂ ಮಗಳು ಕೇಳಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. “ಮರ್ಯಾದೆಗೆ ಅಂಜಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ” ಎಂಬ ಸಾಲುಗಳು ಡೆತ್ ನೋಟಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ.

ಅಷ್ಟೇ ಅಲ್ಲದೆ, ಮಹದೇವಸ್ವಾಮಿ ತಮ್ಮ ಆಸ್ತಿಯನ್ನು ತಮ್ಮ ಸಹೋದರರಿಗೆ ನೀಡಿ, ಮಗಳಿಗೆ ಯಾವ ಕಾರಣಕ್ಕೂ ಕೊಡಬಾರದು ಎಂಬ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಬೂದನೂರು ಹಾಗೂ ಹೆಚ್‌ಡಿ ಕೋಟೆಯಲ್ಲಿರುವ ಮನೆ, ಜಮೀನು, ಹಾಗೂ ಮನೆಯಲ್ಲಿದ್ದ 2.5 ಲಕ್ಷ ರೂಪಾಯಿಯನ್ನು ಸಹೋದರಿಗೆ ನೀಡಲು ಸೂಚಿಸಿದ್ದಾರೆ. ಆತ್ಮಹತ್ಯೆಗೆ ಮುನ್ನ ಗೂಗಲ್ ಪೇ ಮೂಲಕ ಹಣವನ್ನು ಸ್ನೇಹಿತರಿಗೆ ತಲುಪಿಸಿ, ಅವರು ಕೊನೆಯ ಇಚ್ಛೆಯಂತೆ ಎಲ್ಲಾ ಕ್ರಮ ಕೈಗೊಳ್ಳಲಿ ಎಂಬ ಭರವಸೆ ವ್ಯಕ್ತಪಡಿಸಿದ್ದರು.

ಮೃತರನ್ನು ಮಹದೇವಸ್ವಾಮಿ, ಪತ್ನಿ ಮಂಜುಳಾ ಮತ್ತು ಕಿರಿಯ ಮಗಳು ಹರ್ಷಿತಾ ಎಂದು ಗುರುತಿಸಲಾಗಿದೆ. ಮೂವರು ತಮ್ಮ ಕಾಲುಗಳಿಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ಘಟನೆ ನಡೆದ ಸ್ಥಳವಾದ ಬೂದನೂರು ಗ್ರಾಮದಲ್ಲಿ ಶೋಕಾಂತಿಕ ವಾತಾವರಣವಿದ್ದು, ಗ್ರಾಮಸ್ಥರು ಆಘಾತದಲ್ಲಿದ್ದಾರೆ.

ಹಿರಿಯ ಮಗಳು ಅರ್ಪಿತಾ ಮೈಸೂರಿನಲ್ಲಿ ಕಾನೂನು ಪದವಿ ಓದುತ್ತಿದ್ದಳು. ಎರಡನೇ ಮಗಳು ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದಳು. ಅನ್ಯಜಾತಿಯ ಯುವಕನೊಂದಿಗೆ ಪ್ರೀತಿಯ ಸಂಬಂಧದಲ್ಲಿದ್ದು, ತಂದೆ-ತಾಯಿಯ ವಿರೋಧವನ್ನು ಉಲ್ಲಂಘಿಸಿ ಮನೆ ಬಿಟ್ಟು ಹೋಗಿದ್ದಳು. ಅರ್ಪಿತಾ ತನ್ನ ತಂದೆ, ತಾಯಿ ಹಾಗೂ ಸಹೋದರಿಯ ಅಂತಿಮ ದರ್ಶನಕ್ಕೂ ಬರದೆ ನಿರ್ಲಕ್ಷ್ಯ ತೋರಿಸಿದ್ದು, ಈ ವರ್ತನೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.