ಮನೆ ಸ್ಥಳೀಯ ರಾಜ್ಯದಲ್ಲಿ ‘ಥಗ್ಸ್ ಲೈಫ್’ ಸಿನಿಮಾ ಬಿಡುಗಡೆಯಾದರೆ ಅಖಂಡ ಕರ್ನಾಟಕ ಬಂದ್ : ವಾಟಾಳ್ ನಾಗರಾಜ್

ರಾಜ್ಯದಲ್ಲಿ ‘ಥಗ್ಸ್ ಲೈಫ್’ ಸಿನಿಮಾ ಬಿಡುಗಡೆಯಾದರೆ ಅಖಂಡ ಕರ್ನಾಟಕ ಬಂದ್ : ವಾಟಾಳ್ ನಾಗರಾಜ್

0

ಮೈಸೂರು: ನಟ ಕಮಲ್ ಹಾಸನ್ ಅವರ ವಿರುದ್ಧ ಇದೀಗ ಕರ್ನಾಟಕದಲ್ಲಿ ಆಕ್ರೋಶದ ಗಾಳಿ ಎದ್ದಿದೆ. ಕನ್ನಡ ಭಾಷೆಗೆ ಅವಮಾನವಾಗುವ ರೀತಿಯಲ್ಲಿ ನೀಡಿದ ಹೇಳಿಕೆ ಹಿನ್ನೆಲೆ, ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿರುವ ಕನ್ನಡ ಪರ ಹೋರಾಟಗಾರ ಹಾಗೂ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕ್ಷಮೆ ಕೇಳಬೇಕು, ಇಲ್ಲದೆ ಹೋದರೆ ಅವರ ನಟನೆಯ ಥಗ್ ಲೈಫ್ ಬಿಡುಗಡೆಯಾದ್ರೆ ಕರ್ನಾಟಕ ರಣರಂಗ ಆಗಲಿದೆ ಎಂಬುದಾಗಿ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡುತ್ತಾ, ರಾಜ್ಯದಾದ್ಯಂತ ಅಖಂಡ ಬಂದ್ ಮಾಡಲು ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, “ಕಮಲ್ ಹಾಸನ್ ಒಬ್ಬ ಮೂರ್ಖ, ಅವಿವೇಕಿ ಹಾಗೂ ಅಯೋಗ್ಯ ವ್ಯಕ್ತಿ. ಕನ್ನಡದ ಬಗ್ಗೆ ಮಾತನಾಡುವ ಮೊದಲು ಅವರು ಯೋಚಿಸಬೇಕಿತ್ತು. ಅವರ ಹೇಳಿಕೆಗಳು ನಮ್ಮ ಭಾಷೆ, ಸಂಸ್ಕೃತಿ, ಅಸ್ತಿತ್ವಕ್ಕೆ ಧಕ್ಕೆ ತರುತ್ತವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೂಡ ಸುಮ್ಮನಿರಬಾರದು. ತುರ್ತು ಅಧಿವೇಶನ ಕರೆಯಬೇಕು,” ಎಂದು ಒತ್ತಾಯಿಸಿದರು.

ಕಮಲ್ ಹಾಸನ್ ಅಭಿನಯದ ಹೊಸ ಚಿತ್ರ ‘ಥಗ್ಸ್ ಲೈಫ್’ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರದ ಬಿಡುಗಡೆಯಾಗುವ ದಿನ ಕರ್ನಾಟಕವೇ ರಣರಂಗವಾಗಲಿದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದರು. “ಕನ್ನಡಿಗರಿಗೆ ಅವಮಾನವಾಗುವಂತಹ ವ್ಯಕ್ತಿಯ ಚಲನಚಿತ್ರ ನಮ್ಮ ರಾಜ್ಯದಲ್ಲಿ ಬಿಡುಗಡೆ ಆಗುವುದು ಸಹಿಸಲಾರದ ಸಂಗತಿ. ಅವರು ಕ್ಷಮೆ ಕೇಳದಿದ್ದರೆ ಚಿತ್ರ ಪ್ರದರ್ಶನವೇ ಅಸಾಧ್ಯ” ಎಂದು ಹೇಳಿದರು.

“ಕ್ಷಮೆ ಕೇಳದಿದ್ದರೆ ಕನ್ನಡ ಸಂಘಟನೆಗಳ ಜೊತೆಗೆ ಮಾತುಕತೆ ನಡೆಸಿ ಕನ್ನಡ ರಾಜ್ಯ ಬಂದ್ ಘೋಷಣೆ ಮಾಡುತ್ತೇವೆ. ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಹೋರಾಟಗಾರರು ಸಜ್ಜಾಗಬೇಕು. ನಾವು ಜೈಲಿಗೆ ಹೋಗಲು ಸಿದ್ಧ. ಆದರೆ ಕನ್ನಡಕ್ಕೆ ಅವಮಾನ ಆಗೋದು ಸಹಿಸುವುದಿಲ್ಲ” ಎಂದು ತಿಳಿಸಿದರು.