ಮನೆ ರಾಜ್ಯ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ 40 ಚುಕ್ಕೆ ಜಿಂಕೆಗಳ ಸ್ಥಳಾಂತರ

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ 40 ಚುಕ್ಕೆ ಜಿಂಕೆಗಳ ಸ್ಥಳಾಂತರ

0

ಮೈಸೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅರಣ್ಯದಲ್ಲಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ಶ್ರೇಣಿಗೆ 40 ಚುಕ್ಕೆ ಜಿಂಕೆಗಳನ್ನು ಸ್ಥಳಾಂತರಿಸಲಾಗಿದೆ.

ಮಂಗಳವಾರ (ಫೆಬ್ರವರಿ 20) ಚುಕ್ಕೆ ಜಿಂಕೆಗಳನ್ನು ಕಳಿಸಲಾಗಿದ್ದು ಬುಧವಾರ ಬೆಳಿಗ್ಗೆ ಜಿಂಕೆಗಳು ಸುರಕ್ಷಿತವಾಗಿ ದಾಂಡೇಲಿಯನ್ನು ತಲುಪಿವೆ.

ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ ಮಹೇಶ್ ಕುಮಾರ್ ಮಾತನಾಡಿ, ಚುಕ್ಕಿ ಜಿಂಕೆಗಳಿಗೆ 3 ತಿಂಗಳಿನಿಂದ ತರಬೇತಿ ನೀಡಲಾಗಿದೆ. KTR ನಲ್ಲಿ ಚುಕ್ಕಿ ಜಿಂಕೆಗಳನ್ನು ಕ್ವಾರಂಟೈನ್ ಮಾಡಲು 2.5 ಎಕರೆಗಳ ಸುತ್ತುವರಿದ ಪ್ರದೇಶವನ್ನು ವಿನ್ಯಾಸಗೊಳಿಸಲಾಗಿದೆ. ಇದು ಜಿಂಕೆಗಳು ಹೊಸ ಪರಿಸರಕ್ಕೆ ಒಗ್ಗಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಅವಧಿಯಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದರು.

ಹಿಂದಿನ ಲೇಖನಫೆ.26 ರಿಂದ ಎರಡು ದಿನ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಯುವ ಸಮೃದ್ಧಿ ಸಮ್ಮೇಳನ’: ಉದ್ಯೋಗ ಮೇಳ
ಮುಂದಿನ ಲೇಖನಸಿಗರೇಟ್ ಖರೀದಿಸಲು ಕಾನೂನು ಬದ್ಧ ವಯಸ್ಸು 21ಕ್ಕೆ ಏರಿಕೆ: ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ