ಮನೆ ರಾಜ್ಯ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ : ಸಿಎಂ ಕೊಟ್ಟ ಹೇಳಿಕೆಯಿಂದ ಪ್ರಮುಖ ಆರೋಪಿಗಳು ಪರಾರಿ!

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ : ಸಿಎಂ ಕೊಟ್ಟ ಹೇಳಿಕೆಯಿಂದ ಪ್ರಮುಖ ಆರೋಪಿಗಳು ಪರಾರಿ!

0

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ರವರು ನೀಡಿದ ಹೇಳಿಕೆಯಿಂದ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ಪ್ರಮುಖ ಆರೋಪಿಗಳು ಪರಾರಿಯಾಗಿದ್ದಾರೆ.

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ, ಕರ್ನಾಟಕ ರಾಜ್ಯ ಕ್ರಿಕೆಟ್‌ ಮಂಡಳಿ (ಕೆಎಸ್‌ಸಿಎ) ಮತ್ತು ಕಾರ್ಯಕ್ರಮ ನಿರ್ವಹಣೆ ಮಾಡಿದ್ದ ಡಿಎನ್‌ಎ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ ದಾಖಲಾದ ನಂತರ ಈ ಮೂರು ಸಂಸ್ಥೆಗಳ ಪ್ರಮುಖರನ್ನು ಬಂಧಿಸಬೇಕಿತ್ತು. ಆದರೆ ಪೊಲೀಸರ ಬಂಧನಕ್ಕೂ ಮೊದಲೇ ಈ ಸಂಸ್ಥೆಗಳ ಪ್ರಮುಖರು ಪರಾರಿಯಾಗಿದ್ದಾರೆ.

ಮತ್ತಷ್ಟು ವಿವರವಾಗಿ ನೋಡಿದರೆ, ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಯಾವುದೇ ನಿರ್ಲಕ್ಷ್ಯವಿದ್ದರೆ, ಅವು ತೀವ್ರವಾಗಿ ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. “ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಡಿಎನ್‌ಎ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.” ಮೂರು ಸಂಸ್ಥೆಗಳ ಮುಖ್ಯಸ್ಥರನ್ನು ಬಂಧಿಸುತ್ತೇವೆ ಎಂದು ಘೋಷಿಸಿದ್ದರು.

ಆದರೆ ಸಿಎಂ ಅವರ ಈ ಲೈವ್ ಹೇಳಿಕೆಯ ಬೆನ್ನಲ್ಲೇ, ಈ ಸಂಸ್ಥೆಗಳ ಪ್ರಮುಖರು ಪೊಲೀಸರ ಬಂಧನಕ್ಕೆ ಮುನ್ನವೇ ತಕ್ಷಣ ಸ್ಥಳದಿಂದ ಪರಾರಿಯಾಗಿರುವುದು ತನಿಖಾ ತಂಡದ ಆಘಾತಕ್ಕೆ ಕಾರಣವಾಗಿದೆ. ಕೆಲವೊಂದು ಮೂಲಗಳ ಪ್ರಕಾರ, ಅವರು ಈ ಹೇಳಿಕೆಯನ್ನು ಕೇಳಿದ ನಂತರವೇ ಓಡಿದ್ದಾರೆ ಎಂಬ ಅನುಮಾನವೂ ಇದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಡಿಎನ್‌ಎ ಸಂಸ್ಥೆಯಿಂದ ಸುನೀಲ್ ಮ್ಯಾಥ್ಯೂ, ಕಿರಣ್ ಹಾಗೂ ವಿನೋದ್ ಬಂಧಿತರಾಗಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ (ಕೆಎಸ್‌ಸಿಎ) ಪ್ರತಿನಿಧಿಯೊಬ್ಬರ ಬಂಧನವಾಗಿದ್ದು, ಆದರೆ ಅವರ ಹೆಸರು ಬಹಿರಂಗಪಡಿಸಿಲ್ಲ. ಇದರ ಜೊತೆಗೆ ಇನ್ನೂ ಕೆಲ ಕೆಎಸ್‌ಸಿಎ ಪ್ರಮುಖರು ಇನ್ನೂ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಘಟನೆದ ನಂತರ ಪೊಲೀಸರು ಇದೀಗ ಪರಾರಿಯಾದ ಆರೋಪಿಗಳನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.