ಮನೆ ರಾಜ್ಯ ಬ್ಯಾಂಕ್ ಸಾಲ ವಸೂಲಾತಿ: ಗ್ರಾಮೀಣ ಬ್ಯಾಂಕಿಗೆ ರೈತರ ಮುತ್ತಿಗೆ

ಬ್ಯಾಂಕ್ ಸಾಲ ವಸೂಲಾತಿ: ಗ್ರಾಮೀಣ ಬ್ಯಾಂಕಿಗೆ ರೈತರ ಮುತ್ತಿಗೆ

0

ಮೈಸೂರು(Mysuru): ರೈತರ ಸಾಲ ವಸೂಲಿಗಾಗಿ ನೋಟಿಸ್ ನೀಡುವುದು ಮತ್ತು ಒತ್ತಡ ಏರುವುದು ನ್ಯಾಯಾಲಯಕ್ಕೆ ಮೊಕದ್ದಮೆ ದಾಖಲಿಸುವುದು ರೈತರ ಸಾಲವನ್ನು ನವೀಕರಣ ಮಾಡುತ್ತೇನೆಂದು ಸಹಿ ಪಡೆದು ದುರುಪಯೋಗಪಡಿಸಿಕೊಂಡಿರುವುದು ಸೇರಿದಂತೆ ಮತ್ತಿತರ ಸಮಸ್ಯೆಗಳ ಬಗ್ಗೆ ಆಕ್ರೋಶಗೊಂಡ ಹಂಪಾಪುರ  ಹೋಬಳಿಯ ರೈತರು ಇಂದು ನೇತೃತ್ವದಲ್ಲಿ ಇಂದು ಎಚ್ ಡಿ ಕೋಟೆ ತಾಲೂಕಿನ ಹೊಮ್ಮರಗಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಮುತ್ತಿಗೆ ಹಾಕಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್  ನೇತೃತ್ವದಲ್ಲಿ, ಶುಕ್ರವಾರ ರೈತರಿಗೆ ಕಿರುಕುಳ ನೀಡುವ ಬ್ಯಾಂಕ್ ಮ್ಯಾನೇಜರ್ ಗೆ ದಿಕ್ಕಾರ ಬೇಡವೇ ಬೇಡ ಬಲತ್ಕಾರ ವಸೂಲಾತಿ ಬೇಡ ಎಂದು ಘೋಷಣೆ ಕೂಗುತ್ತಾ ರೈತರು ಬ್ಯಾಂಕಿಗೆ ಮುತ್ತಿಗೆ ಹಾಕಿದ್ದಾರೆ.

ಆಡಳಿತ ನಡೆಸುವ ಸರ್ಕಾರಗಳು ಬಂಡವಾಳಶಾಹಿಗಳಿಗೆ  ಶ್ರೀಮಂತರ ಪರ ಇರುವ ಒಲವು ರೈತರ ಬಗ್ಗೆ ಕಣ್ಣೀರು ಸುರಿಸುವ ನಾಟಕವಾಡುತ್ತಾರೆ.  ಕೊರೋನಾ ಸಂಕಷ್ಟ ಕಾಲದಲ್ಲಿ ಉದ್ಯಮಿಗಳಿಗೆ ನೆರವಾಗಲೆಂದು   ಹೆಚ್ಚುವರಿಯಾಗಿ ಶೇಕಡಾ 30ರಷ್ಟು ಹೆಚ್ಚುವರಿ ಸಾಲ ನೀಡಿದ್ದಾರೆ ಆದರೆ ರೈತರಿಗೆ ಸಾಲ ವಸೂಲಾತಿ ಗಾಗಿ ಕಿರುಕುಳ ನೀಡುತ್ತಿದ್ದಾರೆ ಈ ದೇಶದ ಆಡಳಿತ ಆಡಳಿತ ವ್ಯವಸ್ಥೆ ಆಗಿದೆ ಅದಕ್ಕಾಗಿ ರೈತರು ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

ಸ್ಥಳಕ್ಕೆ ಬಂದ ವ್ಯವಸ್ಥಾಪಕ ಗಣೇಶ್ ರವರನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡರು.

ಹಿಂದಿನ ವ್ಯವಸ್ಥಾಪಕರು ರೈತರಿಂದ ಸಾಲ ನವೀಕರಿಸುವ ಸಹಿ ಪಡೆದು ರೈತರ ಗಮನಕ್ಕೆ ಬಾರದಂತೆ ಹೆಚ್ಚು ಸಾಲ ಬಿಡುಗಡೆ ಮಾಡಲಾಗಿದೆ ಎಂದು ರೈತರನ್ನು ವಂಚಿಸಿರುವುದು ಕಂಡುಬಂದಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದಾಗ  ದೂರವಾಣಿ ಮೂಲಕ ವಿಭಾಗಿಯ ಕಾರ್ಯನಿರ್ವಾಹಕ ವ್ಯವಸ್ಥಾಪಕರು ಜುಲೈ 8ರಂದು ಬ್ಯಾಂಕಿನಲ್ಲಿ ಈ ಭಾಗದ ರೈತರೊಂದಿಗೆ ಸಭೆ ನಡೆಸಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ ನಂತರ ಚಳುವಳಿಯನ್ನು ಕೈಬಿಡಲಾಯಿತು.

ಈ ಚಳುವಳಿಯಲ್ಲಿ ರಾಜ್ಯ ಕಬ್ಬು ಬೆಳಗಾರರ ಸಂಘದ ಪದಾಧಿಕಾರಿಗಳಾದ ಕೆಂಡಗಣ್ಣಸ್ವಾಮಿ, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ವೃಷಭೇಂದ್ರ, ಬಿಎಂ ಮಂಜು, ನಿಂಗಣ್ಣ, ಮಾದೇವಪ್ಪ, ಸ್ವಾಮಿಗೌಡ, ದೇವಮಣಿ, ಚಿರತೆ ರಾಜು, ಶೇಖರ್, ರಾಜೇಶ್, ನೂರಾರು ರೈತರು ಭಾಗವಹಿಸಿದ್ದರು.