ಮಂಡ್ಯ: ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಸಂಸ್ಥೆಯಲ್ಲಿ 2025-26 ನೇ ಶೈಕ್ಷಣಿಕ ಸಾಲಿಗೆ ಬೋಧನೆ ಮಾಡಲು ಅತಿಥಿ ಉಪನ್ಯಾಸಕರು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಸಂಖ್ಯೆ ಕಸಂವಾ 183 ಕಸಧ 2022, ಬೆಂಗಳೂರು ದಿನಾಂಕ 09,10,2024 ರ ಮೇಲೆ ನಿಗಧಿಪಡಿಸಿರುವ ಗೌರವ ಸಂಭಾವನ ಆಧಾರದ ಮೇಲೆ ಷರತ್ತು ಹಾಗೂ ನಿಬಂಧನೆಗಳನ್ವಯ ಕಾರ್ಯನಿರ್ವಹಿಸಬೇಕಾಗಿರುತ್ತದೆ.
ಅರ್ಜಿಯನ್ನು ಜೂನ್ 16 ರ 5.30 ಗಂಟೆವರೆಗೆ ಸಲ್ಲಿಸಬಹುದಾಗಿದ್ದು, ಜೂನ್ 26 ರಂದು 11.00 ಗಂಟೆಗೆ ಕಾವಾ ಸಂಸ್ಥೆಯಲ್ಲಿ ಸಂದರ್ಶನವನ್ನು ನಡೆಸಲಾಗುವುದು.
ಅನ್ವಯ ಕಲೆ, ಚಿತ್ರಕಲೆ ಶಿಲ್ಪ, ಕಲೆ ಅಚ್ಚುಕಲೆ (ಗ್ರಾಫಿಕ್ಸ್) ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ, ಕಲಾ ಇತಿಹಾಸ, ಕನ್ನಡ, ಇಂಗ್ಲಿಷ್, ಹಿಂದಿ ಭಾರತ ಮತ್ತು ಭಾರತೀಯ ಸಂವಿಧಾನ ಹಾಗೂ ಸಂವಿಧಾನದ ಮೌಲ್ಯಗಳು, ಸೈಬರ್ ಸೆಕ್ಯೂರಿಟಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ವಿಷಯಗಳಿಗೆ ಸಂಬAಧಿಸಿದAತೆ ಉಪನ್ಯಾಸಕರು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸರ್ಕಾರದ ಅಂತರ್ಜಾಲ ವಿಳಾಸ www.mysore.nic.in ಮತ್ತು www.cavamysore karnataka.gov.in ದೂ.ಸಂ: 0821-2438931 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.














