ಮನೆ ಕಾನೂನು ಕೋರ್ಟ್ ಆದೇಶ ಪಾಲನೆಯಲ್ಲಿ ಆಗುವ ವಿಳಂಬಕ್ಕೆ ಇಲಾಖೆ ಮುಖ್ಯಸ್ಥರೆ ಹೊಣೆ: ರಾಜ್ಯ ಸರ್ಕಾರ ಆದೇಶ

ಕೋರ್ಟ್ ಆದೇಶ ಪಾಲನೆಯಲ್ಲಿ ಆಗುವ ವಿಳಂಬಕ್ಕೆ ಇಲಾಖೆ ಮುಖ್ಯಸ್ಥರೆ ಹೊಣೆ: ರಾಜ್ಯ ಸರ್ಕಾರ ಆದೇಶ

0

ಬೆಂಗಳೂರು: ಕಾಲಮಿತಿಯಲ್ಲಿ ಕೋರ್ಟ್ ಆದೇಶಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿರುವ ಅವರು, ಒಂದು ವೇಳೆ ವಿಳಂಬ ಮಾಡಿದ್ರೇ, ಇಲಾಖೆಯ ಮುಖ್ಯಸ್ಥರೇ ಹೊಣೆಯಾಗುತ್ತಾರೆ. ಭವಿಷ್ಯದಲ್ಲಾಗುವ ಬೆಳವಣಿಗೆಗಳಿಗೆ ಇಲಾಖೆಗಳೇ ಹೊಣೆಗಾರರು ಎಂಬುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಆದೇಶ ಹೊರಡಿಸಲಾಗಿದ್ದು,  ರಾಜ್ಯ ವಿವಿಧ ಇಲಾಖೆಗಳಿಂದ ಬಡ್ತಿ, ಮುಂಬಡ್ತಿ, ಸೇವಾ ಹಿರಿತನ ತಾರತಮ್ಯ, ವೇತನ ತಾರತಮ್ಯ ಸೇರಿದಂತೆ ವಿವಿಧ ಕಾರಣದಿಂದಾಗಿ ಕೋರ್ಟ್ ಮೆಟ್ಟಿಲೇರುತ್ತಿರುವ ಪ್ರಕರಣ ಹೆಚ್ಚಾಗಿವೆ. ಕೋರ್ಟ್ ಆದೇಶ, ಸೂಚನೆ ಇದ್ದರೂ ಸರಿಯಾದ ಸಮಯಕ್ಕೆ ಪಾಲನೆ ಆಗುತ್ತಿಲ್ಲ.ಹೀಗೆ ಕೋರ್ಟ್ ಆದೇಶ ಪಾಲನೆಯಲ್ಲಿ ಆಗುವಂತ ವಿಳಂಬಕ್ಕೆ ಇಲಾಖೆ ಮುಖ್ಯಸ್ಥರೇ ಹೊಣೆ ಎಂಬುದಾಗಿ ಆದೇಶಿಸಿದೆ.

ಸುಪ್ರೀಂ ಕೋರ್ಟ್, ಹೈಕೋರ್ಟ್, ಕೆಎಟಿ ನ್ಯಾಯಾಲಯಗಳು ಆದೇಶಗಳನ್ನು ಸೂಕ್ತ ಕಾಲದಲ್ಲಿ ಜಾರಿಗೊಳಿಸೋದಕ್ಕೆ, ಪಾಲಿಸಲು ಸರ್ಕಾರಗಳಿಗೆ ಆದೇಶಗಳನ್ನು ಹೊರಡಿಸಿವೆ. ಹೀಗಿದ್ದೂ ಇಲಾಖಾ ಅಧಿಕಾರಿಗಳು ಆದೇಶಗಳನ್ನು ಅನುಷ್ಠಾನಗೊಳಿಸಿಲ್ಲ. ಇದೇ ಕಾರಣದಿಂದ ನಾನಾ ಇಲಾಖೆಗಳ ನಡವಳಿಕೆಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದ್ದಾರೆ.

ಇನ್ನೂ ಈ ಪ್ರಕರಣಗಳಿಂದಾಗಿ ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿಯಾಗಿ ಆರ್ಥಿಕ, ಆಡಳಿತಾತ್ಮಕ ಮತ್ತು ಕಾನೂನು ಹೊರೆ ಬೀಳುತ್ತಿದೆ ಎಂದು ತಿಳಿಸಿದ್ದಾರೆ.

ರ್ಕಾರಿ ಇಲಾಖೆಗಳಲ್ಲಿ ಆಗುತ್ತಿರುವಂತ ಅಕ್ರಮಗಳ ಪ್ರಕರಣಗಳನ್ನು ನ್ಯಾಯಾಲಯಗಳು ವಿಚಾರಣೆ ನಡೆಸಿ, ತೀರ್ಪು ನೀಡಿದರೂ ಇಲಾಖಾ ಅಧಿಕಾರಿಗಳು ಕೋರ್ಟ್ ತೀರ್ಪುಗಳನ್ನು ಅನುಷ್ಠಾನಗೊಳಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ, ಈ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.