ಮನೆ ಸುದ್ದಿ ಜಾಲ ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ: ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ, ನಾಪತ್ತೆ

ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ: ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ, ನಾಪತ್ತೆ

0

ಹುಬ್ಬಳ್ಳಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ವ್ಯಕ್ತಿಯೊಬ್ಬರು ಆಯತಪ್ಪಿ ಚರಂಡಿಗೆ ಬಿದ್ದು ಕೊಚ್ಚಿ ಹೋಗಿರುವ ಘಟನೆ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗಲಿ ರಸ್ತೆಯಲ್ಲಿ ನಡೆದಿದೆ.

ಮಳೆಯು ನಿರಂತರವಾಗಿ ಸುರಿಯುತ್ತಿದ್ದು, ರಸ್ತೆಗಳ ಪಕ್ಕದ ಚರಂಡಿಗಳು ತುಂಬಿ ಹರಿಯುತ್ತಿರುವ ಸಂದರ್ಭದಲ್ಲಿ, ಬೀರಬಂದ ಓಣಿಯ ನಿವಾಸಿ ಹುಸೇನ ಅವರು ಬೆಳಗಲಿ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅದೇ ಸಮಯದಲ್ಲಿ ಆಯತಪ್ಪಿ ಅವರು ಚರಂಡಿಗೆ ಬಿದ್ದು, ಉಕ್ಕಿಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಚರಂಡಿಯಲ್ಲಿ ನೀರಿನ ಪ್ರವಾಹ ಗಂಭೀರವಾಗಿದ್ದರಿಂದ, ಹುಸೇನ ಅವರಿಗೆ ತಕ್ಷಣದಲ್ಲೇ ಹೊರಬರುವ ಅವಕಾಶ ಸಿಕ್ಕಿಲ್ಲ. ಈ ಬಗ್ಗೆ ಸ್ಥಳೀಯರು ಕೂಡಲೇ ಕಸಬಾಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾರಂಭಿಸಿದ್ದಾರೆ. ಆದರೆ ಇದುವರೆಗೂ ಪತ್ತೆಯಾಗಿಲ್ಲ.